ಸವದತ್ತಿ: “ವಿದ್ಯಾರ್ಥಿಗಳು, ಸಮೂದಾಯದವರು ಹಾಗೂ ಶಿಕ್ಷಕರು ತಮ್ಮ ಶಾಲೆಯ ಮತ್ತು ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಪರಿಸರವನ್ನು ಸುಂದರವಾಗಿಡಲು ಶ್ರಮಿಸಬೇಕು.” ಎಂದು ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ನಂ-೬ ಸವದತ್ತಿಯಲ್ಲಿ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮದ “ಸ್ವಚ್ಛತಾ ಶಪಥ ದಿನ”ದ ಪ್ರಯುಕ್ತ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದು ಹದಿನೈದು ದಿನದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಸ್ವಚ್ಛತಾ ಜಾಗೃತಿ ದಿನ, ಸಮೂದಾಯ ಬಾಗವಹಿಸುವಿಕೆಯ ದಿನ, ಹಸಿರು ಶಾಲಾ ಚಾಲನೆ, ಕೈತೊಳೆಯುವ ದಿನ, ವೈಯಕ್ತಿಕ ನೈರ್ಮಲ್ಯ ದಿನ, ಶಾಲಾ ಪ್ರದರ್ಶನ ದಿನ, ಕ್ರಿಯಾ ಯೋಜನೆಯಂತಹ ಹಲವಾರು ಚಟುವಟಿಕೆಗಳಿದ್ದು ಎಲ್ಲರೂ ಪಾಲ್ಗೊಂಡು ಯಶಸ್ವಿ ಮಾಡಲು ತಿಳಿಸಲಾಯಿತು.
ನಂತರ ಮಕ್ಕಳಿಗೆ “ಸ್ವಚ್ಛತಾ ಶಪಥ ದಿನ”ದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿ ಎಮ್.ಆರ್.ಫಂಡಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಅಡುಗೆ ಸಿಬ್ಬಂಧಿಯವರು ಮತ್ತು ಪಾಲಕರು ಪಾಲ್ಗೋಂಡರು.