This is the title of the web page
This is the title of the web page

Please assign a menu to the primary menu location under menu

State

ಕಾರಟಗಿ: ಕಿಂದಿಕ್ಯಾಂಪಿನಲ್ಲಿ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ


ಕೊಪ್ಪಳ ಏಪ್ರಿಲ್ ೨೬ : ಕಾರಟಗಿ ತಾಲೂಕಿನ ಯರಡೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿಂದಿಕ್ಯಾಂಪ್(ಐದನೇ ವಾರ್ಡ್) ನಲ್ಲಿ ಏಪ್ರಿಲ್ ೨೫ರಂದು ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮದ £ವಾಸಿಗಳಿಂದ ಅಣಕು ಮತದಾನ ಮಾಡಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ತಿಮ್ಮಾರೆಡ್ಡಿ ಅವರು ಮಾತನಾಡಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ, ಸಂವಿಧಾನಾತ್ಮಕವಾಗಿ ಮತ ಹಾಕುವುದು ನಮ್ಮ ಕರ್ತವ್ಯ, ಗ್ರಾಮದಲ್ಲಿನ ಪ್ರತಿಯೊಬ್ಬರೂ ಮತದಾನದಿಂದ ಯಾರು ಹೊರಗುಳಿಯಬಾರದು. ನಮ್ಮ ಗ್ರಾಮ ಪಂಚಾಯತಿಯ ಶೇ.೧೦೦ ರಷ್ಟು ಮತದಾನವಾಗಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ತಾ.ಪಂ ಐಇಸಿ ಸಂಯೋಜಕ ಸೋಮನಾಥ ನಾಯಕ ಅವರು ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ £Ãಡಿ, ಕ್ಯಾಂಪ್‌ನ £ವಾಸಿಗಳಿಂದ ಅಣಕು ಮತದಾನ ಮಾಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಕಾರ್ಯದರ್ಶಿ ಹನುಮಂತಪ್ಪ, ಸಿಬ್ಬಂದಿಗಳಾದ ಗ್ಯಾನಪ್ಪ ಕುಂಟೋಜಿ, ಹುಸೇನಪ್ಪ, ರಾಮಲಿಂಗಪ್ಪ, ದುರಗಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.


Leave a Reply