ಯರಗಟ್ಟಿ : ದೇಶದ ಶಕ್ತಿ, ಶೌರ್ಯದ ಪ್ರತಿರೂಪವಾದ ಯೋಧ ನಿವೃತ್ತಿ ಹೊಂದಿದರೆ ಆತನಿಗೆ ವೈಭವದಿಂದ ಬರಮಾಡಿಕೊಳ್ಳುವುದು ಹೆಮ್ಮೆಯ ಸಂಗತಿ. ಇಂತಹ ಒಂದು ಗಳಿಗೆಗೆ ಯರಗಟ್ಟಿ ಸಾಕ್ಷಿಯಾಗಿತ್ತು.
ಕಳೆದ ೧೮ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧ ತಾಲೂಕಿನ ಚಿಕ್ಕೊಪ್ಪ ಗ್ರಾಮದ ವಿರೇಶ ಚಿ. ಕೊಪ್ಪದ ಅವರನ್ನು ಮಾಜಿ ಸೈನಿಕರ ಸಂಘದಿಂದ ಸ್ವಾಗತ ಮಾಡಲಾಯಿತು. ಯೋಧನನ್ನು ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.
ಪಟ್ಟಣದ ಜೈ ಜಮಾನ ಜೈ ಕಿಸಾನ್ ಸಭಾ ಭವನದಲ್ಲಿ ನಿವೃತ್ತ ಯೋಧನನ್ನು ಸನ್ಮಾನಿಸಿ ಸಾರ್ವಜನಿಕರಿಂದ ಗೌರವ ಸಮರ್ಪಣೆಗಾಗಿ ಹೂ ಮಾಲೆಯನ್ನು ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿರುಪಾಕ್ಷ ಮದ್ದಾನಿ, ಕುಮಾರ ಜಕಾತಿ, ಮಾಜಿ ಸೈನಿಕರಾದ ಎಮ್. ಎಸ್. ಅಳಗೋಡಿ, ಕುಮಾರ ಹಿರೇಮಠ, ಎನ್. ಆರ್. ಮೆಟ್ಟಗುಡ, ಶಂಕರಗೌಡ ಪಾಟೀಲ, ಬಸವರಾಜ ಸರದಾರ, ಮಹಾಂತೇಶ ಚನ್ನಮೇತ್ರಿ, ಪ್ರಕಾಶ ಕಾತರಕಿ, ರಮೇಶ ಅಜ್ಜನಕಟ್ಟಿ, ರಾಜೇಶ ಕೊಜಾರ, ಸಂತೋಷ ವಾಲಿ, ಪ್ರಕಾಶ ಗಾಣಗಿ, ಆನಂದ ನಾಯ್ಕ, ವಿನಾಯಕ ಕೊಪ್ಪದ ಸೇರಿದಂತೆ ಅನೇಕ ಉಪಸ್ಥಿತರಿದ್ದರು.