This is the title of the web page
This is the title of the web page

Please assign a menu to the primary menu location under menu

Local News

ಪರೀಕ್ಷೆ ಪುಸ್ತಕ ಲೋಕಾರ್ಪಣೆ


ಬೆಳಗಾವಿ ೩೦: ಬೆಳಗಾವಿ ನಗರದ ಚಿಂತಾಮಣರಾವ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಗ್ರಹದಲ್ಲಿ ದಿನಾಂಕ ೩೦ ರಂದು ಪರೀಕ್ಷೆ ಆಧಾರಿತವಾದ ಪುಸ್ತಕ ಲೋಕಾರ್ಪಣೆಯನ್ನು ಮಾಡಲಾಯಿತು. ದಿಶಾ ಫೌಂಡೇಶನ್ ವತಿಯಿಂದ ದ್ವಿತೀಯ ಪಿಯುಸಿಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲವಾಗುವ ಪುಸ್ತಕ ಪರಿಚಯ ಮತ್ತು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ್ ಬೆನಕೆ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಪುಸ್ತಕದ ಮಹತ್ವಾಕಾಂಕ್ಷೆ ಬಗ್ಗೆ ಮಾತನಾಡಿ ವಿಧ್ಯಾರ್ಥಿಗಳು ಈ ಪುಸ್ತಕ ಬಳಸಿಕೊಂಡು ಮುಂಬರುವ ದಿನಗಳಲ್ಲಿ ಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನುಗಳಿಸಿ ಪಾಸ ಆಗಲು ಪರಿಶ್ರಮದ ಅಧ್ಯಯನ ಮಾಡಿ ಆಗ ಮಾತ್ರ ಈ ಪುಸ್ತಕದ ಉದ್ದೇಶ ನೇರವೆರುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ ಹತ್ತು ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದಾಗ ನಮ್ಮ ಜಿಲ್ಲೆಯು ರಾಜ್ಯದ ೩೦ಜಿಲ್ಲೆಗಳ ಪೈಕಿ ೨೪ ರಿಂದ ೨೮ ಸ್ಥಾನದ ಆಸುಪಾಸು ಇರುವಂತಹದ್ದು ಕಂಡು ಬಂದಿದೆ ಈಗ ದಿಶಾ ಸಂಸ್ಥೆಯಿಂದ ಉಚಿತವಾಗಿ ವಿತರಣೆ ಮಾಡುತ್ತಿರುವ ಈ ಪಠ್ಯಪುಸ್ತಕದ ಅಧ್ಯಯನ ಮಾಡಿ ನಮ್ಮ ಬೆಳಗಾವಿಯ ವಿದ್ಯಾರ್ಥಿಗಳು ತಮ್ಮ ಫಲಿತಾಂಶದಲ್ಲಿ ೮೦% ಪ್ರತಿಶತ ಕಿಂತ ಹೆಚ್ಚಿಗೆ ಅಂಕಗಳನ್ನುಗಳಿಸುವ ಅವಕಾಶ ಇದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಮತ್ತು ಅದರ ಪ್ರಯೋಜನವನ್ನು ಪಡೆದುಕೊಂಡು ಹೆಚ್ಚಿಗೆ ಅಂಕಗಳನ್ನು ಗಳಿಸಿಕೊಳ್ಳಬೇಕು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಉಪಕುಲ ಸಚಿವರಾದ ಮುರುಗೇಶ್ ಎ???ಂ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿಯ ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕರ ಮಹಾದೇವ ಕಾಂಬಳೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಜೊತೆಗೆ ವಿಜ್ಞಾನ ಶಿಕ್ಷಕರಾದ ಮಾಲತೇಶ್ ಪಾಟೀಲ್ , ಕನ್ನಡ ಪ್ರಾಧ್ಯಾಪಕರಾದ ಪ್ರವೀಣ್ ಪಾಟೀಲ್, ವಾಣಿಜ್ಯ ಪ್ರದ್ಯಾಪಕರಾದ ಮಹೇಶ್ ಕಾರೆಕರ್, ಮಹಾದೇವ ಧರಿಗೌಡರ, ಕಲಾ ವಿಷಯ ಶಿಕ್ಷಕರಾದ ನಾಗರಾಜ ಮರೆನ್ನವರ ನಗರದ ಯುವ ಜವಳಿ ವ್ಯಾಪಾರಿಗಳಾದ ವೈಭವ ದೇಶಪಾಂಡೆಯವರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Gadi Kannadiga

Leave a Reply