This is the title of the web page
This is the title of the web page

Please assign a menu to the primary menu location under menu

Local News

ಶ್ರೋತೃಗಳಿಗಾಗಿಯೇ ವಿಶೇಷ ಕರ‍್ಯಕ್ರಮ ಯುಗದ ನಗೆ


ಬೆಳಗಾವಿ ೬:- ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೯ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ಕನ್ನಡ ಸಾಹಿತ್ಯ ಭವನ ಸಭಾಭವನದಲ್ಲಿ ‘ಯುಗದ ನಗೆ’ ಎಂಬ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
‘ಯುಗದ ನಗೆ’ ಇದು ಮುಖ್ಯವಾಗಿ ಶ್ರೋತೃಗಳಿಗಾಗಿಯೇ ಇರುವ ಕಾರ್ಯಕ್ರಮ. ಯಾರೇ ಶ್ರೋತೃಗಳು ವೇದಿಕೆಗೆ ಬಂದು ಐದು ನಿಮಿಷಗಳ ಒಂದು ನಗೆಹನಿ ಹಂಚಿಕೊಳ್ಳಬಹುದಾಗಿದೆ. ಭಾಗವಹಿಸಬಯಸುವವರು ಮೊದಲೇ ೯೪೪೮೦೯೩೫೮೯ ನಂಬರಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿ ಅವರು ವಹಿಸಿಕೊಳ್ಳಲಿದ್ದು ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ರಾಮಚಂದ್ರ ಕಟ್ಟಿ ಉಪಸ್ಥಿತರಿರುತ್ತಾರೆ. ಅತಿಥಿಗಳಾಗಿ ನಗೆಮಾತುಗಾರರಾದ ಎಂ. ಬಿ. ಹೊಸಳ್ಳಿ ಹಾಗೂ ಜಿ. ಎಸ್. ಸೋನಾರ ಆಗಮಿಸಲಿದ್ದಾರೆ. ರಘುನಾಥ ಮುತಾಲಿಕ ಅವರು ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರೆ. ತಾನಾಜಿ ನಿರೂಪಿಸಲಿದ್ದಾರೆ.


Gadi Kannadiga

Leave a Reply