This is the title of the web page
This is the title of the web page

Please assign a menu to the primary menu location under menu

State

ಮತದಾನ ಎಲ್ಲರ ಹಕ್ಕು ಕಡ್ಡಾಯವಾಗಿ ಚಲಾಯಿಸಿ


ಲಕ್ಷೆ÷್ಮÃಶ್ವರ: ಏ.೧೧ : ತಾಲೂಕಿನ ಯಳವತ್ತಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಬದು £ರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ ಗೋಣ್ಣೆಮ್ಮನವರ ಮಾತನಾಡಿ, ಮೇ ೧೦ರಂದು ವಿಧನಾಸಭೆ ಚುನಾವಣೆಗೆ ಮತದಾನಕ್ಕೆ ದಿನಾಂಕ £ಗದಿ ಪಡಿಸಲಾಗಿದ್ದು, ಎಲ್ಲರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನ ಪ್ರಜಾಪ್ರಭುತ್ವದ ಶಕ್ತಿಯಾಗಿದ್ದು, ತಪ್ಪದೆ ಎಲ್ಲರು ಮತಚಲಾಯಿಸಬೇಕು. ಅಲ್ಲದೆ ಗ್ರಾಮದ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಬೇರೆ ಊರಿನಲ್ಲಿ ವಾಸವಿರುವ £ಮ್ಮ ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರಿಗೂ, ಮತದಾನದ ಕುರಿತು ತಿಳಿಹೇಳಿ ಮತದಾನದ ದಿನ ಗ್ರಾಮಕ್ಕೆ ಬಂದು ಮತ ಚಲಾಯಿಸಲು ತಿಳಿಸಲಾಯಿತು.
ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಚಲಾಯಿಸಿ. ಜಗತ್ತಿನಲ್ಲಿಯೇ ಅತಿದೊಡ್ಡ ಸಂವಿಧಾನ ಹೊಂದಿರುವ ಭಾರತದಲ್ಲಿ ಚುನಾವಣೆ ಮಹತ್ವ ದೊಡ್ಡದು. ಮತದಾರ ಜಾಗೃತಿಯಾದರೆ ದೇಶದ ಭವಿಷ್ಯ ಉತ್ತಮ ದಿಕ್ಕಿನಲ್ಲಿ ಮುನ್ನಡೆಯುತ್ತದೆ. ಜನರಿಗಾಗಿ ಇರುವ ಸರಕಾರವನ್ನು ಜನರೇ ಆಯ್ಕೆ ಮಾಡುವ ಹಕ್ಕಿರುವುದು ಸಂವಿಧಾನದ ಮೌಲ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕು.
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಜನರು ವರ್ಷಕ್ಕೆ ೧೦೦ ದಿನ ಅಕುಶಲ ಕೆಲಸ ಹಾಗೂ ಪ್ರತಿದಿನಕ್ಕೆ ೩೧೬ ರೂ. ಪಡೆಯಬಹುದಾಗಿದೆ. ಮಹಿಳೆಯರು, ವೃದ್ಧರು, ಅಂಗವಿಕಲರಿಗೂ ಸಮಾನ ಕೂಲಿ £Ãಡಲಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ವರದಾನವಾಗಿದೆ. ಎಲ್ಲರೂ ಯೋಜನೆಯಡಿ ಕೆಲಸ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಗ್ರಾಪಂ ಸಿಬ್ಬಂದಿ ಬಸವರಾಜ ಅರ್ಕಸಾಲಿ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಗ್ರಾಪಂ ಕಾರ್ಯದರ್ಶಿ ವೈ.ಬಿ. ಮಾದರ, ತಾಂತ್ರಿಕ ಸಹಾಯಕರು ಪ್ರದೀಪ ನರೇಗಲ್ಲ, ಬಿಎಫ್‌ಟಿ, ಪಂಚಾಯತಿ ಸಿಬ್ಬಂದಿ, ಜಿಕೆಎಂ ಇತರರಿದ್ದರು.


Leave a Reply