ಕುಷ್ಟಗಿ :-ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಯಿಂದ ತಾಲ್ಲೂಕಿನ ಕಬ್ಬರಗಿ ವ್ಯಾಪ್ತಿಯ ಬೀಳಗಿ ಗ್ರಾಮದಲ್ಲಿ ಇಂದು ಮಿಶ್ರ ತಳಿ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಯಿತು ಎಂದು ಹಿರಿಯ ಪಶುವೈದ್ಯಾಧಿಕಾರಿ ಡಾ.ಸಿದ್ಧಲಿಂಗಯ್ಯ ಶಂಕೀನ್ ತಿಳಿಸಿದರು
ಹಿರಿಯ ಪಶುವೈದ್ಯಾಧಿಕಾರಿ ಡಾ.ಸಿದ್ಧಲಿಂಗಯ್ಯ ಶಂಕೀನ್ ಮಾತನಾಡಿ ಉತ್ತಮ ತಳಿಗಳ ಸಾಕುವ ವಿಧಾನವನ್ನು ತಿಳಿದು ಕೊಂಡು ಹೈನುಗಾರಿಕೆ ಲಾಭದಾಯಕ ವನ್ನಗಿಸಿಕೊಳ್ಳಬೇಕು , ನಿರುದ್ಯೋಗ ಯುವಕ, ಯುವತಿಯರಿಗೆ ಹೈನುಗಾರಿಕೆ ಉದ್ಯೋಗ ಲಾಭದಾಯಕವಾಗಿದೆ, ಇಂದಿನ ಪ್ರಸ್ತುತ ಅಗತ್ಯ ಸನ್ನಿವೇಶದಲ್ಲಿ ರೈತರು ಅಧುನಿಕ ಪಶುಪಾಲನಾ ಚಟುವಟಿಕೆಗಳನ್ನು ಉಳಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ, ನಾವು ಕರುಗಳಿಗೆ ಮತ್ತು ಗರ್ಭ ಧರಿಸಿದ ಆಕಳ ಗಳಿಗೆ ಅಗತ್ಯ ತಕ್ಕಂತೆ ಪೋಷಕಾಂಶ ಆಹಾರ ನೀಡಬೇಕು, ಎಂದು ತಿಳಿಸುತ್ತಾ ಹೈನುಗಾರಿಕೆ ನಿರ್ವಹಣೆ ಬಗ್ಗೆ ತಿಳಿಸಿದರು.
ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಆನಂದ್ ರವರು ಕರುಗಳ ನಿರ್ವಹಣೆ ಮತ್ತು ಜಂತು ನಿವಾರಕ ಔಷಧ ಬಗ್ಗೆ ರೈತರಿಗೆ ಮಾಹಿತಿ ನೀಡಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬಸಮ್ಮಹಿರೇಗೌಡ್ರು, ಪಶುಪಾಲನಾ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ಸಂತೋಷ್, ಸಿಬ್ಬಂದಿ ಅಮರಪ್ಪ, ದಂಡೆಪ್ಪ್, ಸಿದ್ಧಲಿಂಗಪ್ಪ, ರಿಯಾಜ್, ಶರಣು, ಪಶು ಸಖಿ, ಗ್ರಾಮಸ್ಥರು ಹಾಜರಿದ್ದರು.
ಪಶುಪಾಲನಾ ಇಲಾಖೆಯಿಂದ ಉತ್ತಮ ಕರುಗಳ ನಿರ್ವಹಣೆ ಮಾಡಿದವರಿಗೆ ಬಹುಮಾನಗಳನ್ನು ವಿತರಸಲಾಯಿತು ಮತ್ತು ಹಾಜರಿದ್ದ ಎಲ್ಲಾ ಕರುಗಳಿಗೆ ಜಂತು ನಿವಾರಕ ಔಷಧ ಮತ್ತು ಲಿವರ್ ಟಾನಿಕ್ ವಿತರಿಸಲಾಯಿತು.