ಕೊಪ್ಪಳ ಜನವರಿ ೨೭ : ಜಿಲ್ಲೆಯಲ್ಲಿ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟಕಲೆಗಳನ್ನು ಮುನ್ನೆಲೆಗೆ ತರಲು ತರಬೇತಿ ಶಿಬಿರಕ್ಕೆ ಪರಿಣಿತಿ ಹೊಂದಿರುವ ಗುರುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಜನವರಿ ೩೦ ರವರೆಗೆ ವಿಸ್ತರಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ (೨೦೨೨-೨೩ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-೩೧೫ರಂತೆ) ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟಕಲೆಗಳನ್ನು ಮುನ್ನೆಲೆಗೆ ತರಲು ತರಬೇತಿ ಆಯೋಜಿಸುವ ಯೋಜನೆಗೆ ಪ್ರೋತ್ಸಾಹಿಸಲು ಇಂತಹ ಕಲೆಗಳನ್ನು ಕಲಿಯಲು ಆಸಕ್ತರಿರುವ ಕಲಾವಿದರನ್ನು ಗುರುತಿಸಿ ಅವರಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಗುರುತಿಸಿದ ಕಲಾಪ್ರಕಾರಗಳಲ್ಲಿ ಜಿಲ್ಲೆಯಲ್ಲಿ ತರಬೇತಿಯನ್ನು ಹಮ್ಮಿಕೊಳ್ಳುವ ಯೋಜನೆ ಇದ್ದು, ಈ ಶಿಬಿರಕ್ಕೆ ನಶಿಸಿಹೋಗುತ್ತಿರುವ ಕಲಾಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಗುರುಗಳು (ಅಳಿವಿನಂಚಿನಲ್ಲಿರುವ ಕಲಾಪ್ರಕಾರಗಳು ಉದಾ: ಗೀ-ಗೀ ಪದ, ಕೋಲಾಟ, ಹೆಜ್ಜೆಕುಣಿತ, ಕಣಿಹಲಗಿ ವಾದನ, ಸೋಬಾನೆಪದ) ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ಅರ್ಜಿಗಳನ್ನು ಸಲ್ಲಿಸಲು ಜ. ೨೭ ರಿಂದ ಜ. ೩೦ ರವರೆಗೆ ಅವಕಾಶ ನೀಡಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ತರಬೇತಿ ಶಿಬಿರಕ್ಕೆ ಪರಿಣಿತ ಗುರುಗಳಿಂದ ಅರ್ಜಿ : ಅವಧಿ ವಿಸ್ತರಣೆ
ತರಬೇತಿ ಶಿಬಿರಕ್ಕೆ ಪರಿಣಿತ ಗುರುಗಳಿಂದ ಅರ್ಜಿ : ಅವಧಿ ವಿಸ್ತರಣೆ
Suresh27/01/2023
posted on