ಗದಗ ಜುಲೈ ೨೦ : ೨೦೨೨-೨೩ ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾವತಿಯಿಂದ ಅನುಷ್ಠಾನ ಮಾಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ (ತಿತಿತಿ.sತಿ.ಞಚಿಡಿ.ಟಿiಛಿ.iಟಿ) ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ ೩೧ ರ ವರೆಗೆ ವಿಸ್ತರಿಸಿ ಆನ್‌ಲೈನ್ ಮೂಲಕ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರಗಳ ಕಛೇರಿಗೆ ಸಂಪರ್ಕಿಸಬಹುದಾಗಿದೆ. ಸಹಾಯಕ ನಿರ್ದೇಶಕರ ಕಛೇರಿ ಗದಗ ದೂರವಾಣಿ ಸಂಖ್ಯೆ: ೦೮೩೭೨-೨೯೭೨೫೮/೯೪೮೦೮೪೩೧೨೮, ಸಹಾಯಕ ನಿರ್ದೇಶಕರ ಕಛೇರಿ ಮುಂಡರಗಿ ದೂರವಾಣಿ ಸಂಖ್ಯೆ:೦೮೩೭೧-೨೬೨೪೪೯/೯೪೮೦೮೪೩೧೨೯, ಸಹಾಯಕ ನಿರ್ದೇಶಕರ ಶಿರಹಟ್ಟಿ ಕಛೇರಿ ದೂರವಾಣಿ ಸಂಖ್ಯೆ: ೦೮೪೮೭-೨೪೨೩೧೨/೯೪೮೦೮೪೩೧೩೨ ಸಹಾಯಕ ನಿರ್ದೇಶಕರ ರೋಣ ಕಛೇರಿ ದೂರವಾಣಿ ಸಂಖ್ಯೆ:೦೮೩೮೧-೨೬೭೧೨೦/೯೪೮೦೮೪೩೧೩೧ ಸಹಾಯಕ ನಿರ್ದೇಶಕರ ಕಛೇರಿ ನರಗುಂದ ದೂರವಾಣಿ ಸಂಖ್ಯೆ: ೦೮೩೭೭-೨೪೫೭೩೧/ ೯೪೮೦೮೪೩೧೩೦ ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಾರ್ಯಲಯ ಪ್ರಕಟಣೆಯಲ್ಲಿ ತಿಳಿಸಿದೆ.
Gadi Kannadiga > State > ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Suresh20/07/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023