ಬೆಳಗಾವಿ, ಡಿ.೨೮ : ೨೦೨೨ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಅವಧಿಯು ಡಿಸೆಂಬರ್ ೩೧ ರಂದು ಮುಕ್ತಾಯವಾಗುತ್ತಿದ್ದು, ಈ ಫಲಾನುಭವಿಗಳು ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ, ಪಾಸುಗಳನ್ನು ನವೀಕರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸದರಿ ಬಸ್ ಪಾಸ್‌ಗಳ ಮಾನ್ಯತಾ ಅವಧಿಯನ್ನು ಫೆಬ್ರುವರಿ ೨೮, ೨೦೨೩ ರವರೆಗೆ ವಿಸ್ತರಿಸಲಾಗಿದೆ.
೨೦೨೩ ನೇ ಸಾಲಿನ ವಿಕಲಚೇತನರ ಹೊಸ/ನವೀಕರಣ ರಿಯಾಯಿತಿ ಬಸ್ ಪಾಸ್‌ಗಳನ್ನು ಸಂಸ್ಥೆಯಿಂದ ಪಡೆಯಲು ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜನವರಿ ೨, ೨೦೨೩ ರಿಂದ ಪ್ರಾರಂಭವಾಗುತ್ತದೆ.
ವಿಕಲಚೇತನರ ಹೊಸ ಪಾಸ್‌ಗಳನ್ನು ಪಡೆಯಲು ಹಾಗೂ ನವೀಕರಣ ಮಾಡಿಕೊಳ್ಳಲು ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಪಟ್ಟ ವಿಭಾಗ ಹಾಗೂ ಘಟಕವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ, ಸ್ವೀಕೃತಿಯನ್ನು ನಿಗದಿತ ಕಾಲಮಿತಿಯಲ್ಲಿ ಸಂಸ್ಥೆಯ ಸಂಬಂಧಪಟ್ಟ ಪಾಸ್ ಕೌಂಟರ್‌ಗಳಲ್ಲಿ ಸಲ್ಲಿಸಿ ವಿಕಲಚೇತನರ ಬಸ್ ಪಾಸ್‌ಗಳನ್ನು ಪಡೆಯಬಹುದಾಗಿದೆ.
ನಾಗರಿಕರು ಸದರಿ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ವಿಕಲಚೇತನರ ರಿಯಾಯಿತಿ ಬಸ್ ಪಾಸ್ ನವೀಕರಣ ಅವಧಿ ವಿಸ್ತರಣೆ