This is the title of the web page
This is the title of the web page

Please assign a menu to the primary menu location under menu

State

ಬಸ್ ಪಾಸ್ ಮಾನ್ಯತಾ ಅವಧಿ ವಿಸ್ತರಣೆ


ಗದಗ ಜುಲೈ ೪: ೨೦೨೨-೨೩ ನೇ ಸಾಲಿನಲ್ಲಿ ಪದವಿ/ವೃತ್ತಿಪರ/ಸ್ನಾತಕೋತ್ತರ ಹಾಗೂ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತಾ ಅವಧಿಯು ಜೂನ್ ೩೦ಕ್ಕೆ ಮುಕ್ತಾಯಗೊಂಡಿರುತ್ತದೆ. ಆದರೆ ಈ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಇನ್ನೂ ಮುಕ್ತಾಯವಾಗದಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಈ ಹಿಂದೆ ಪಡೆಯುತ್ತಿದ್ದಂತೆ ಒಂದು ಅಥವಾ ಎರಡು ತಿಂಗಳ ಅವಧಿಗೆ ಸಂಸ್ಥೆಯ ಚಾಲ್ತಿಯಲ್ಲಿರುವ ಸುತ್ತೋಲೆಗಳನ್ವಯ ಶೈಕ್ಷಣಿಕ ವರ್ಷ ಪೂರ್ಣಗೊಂಡಿಲ್ಲ ಎಂಬ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ದೃಡೀಕರಣ/ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿ ಪಾಸ್ ನವೀಕರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply