This is the title of the web page
This is the title of the web page

Please assign a menu to the primary menu location under menu

State

ಫ.ಗು.ಹಳಕಟ್ಟಿಯವರ ವಚನ ಸಾಹಿತ್ಯ ಸರ್ವಕಾಲಿಕ : ಹೇಮಲತಾ ನಾಯಕ


ಕೊಪ್ಪಳ : ಫ.ಗು.ಹಳಕಟ್ಟಿಯವರ ವಚನ ಸಾಹಿತ್ಯ ಇಂದಿಗೂ ಸರ್ವ ಜನರಿಗೆ ಬಹು ಉಪಯುಕ್ತವಾದ ವೈಚಾರಿಕ ಚಿಂತನೆಗಳನ್ನು ಒಳಗೊಂಡಿವೆ. ಇವುಗಳನ್ನು ಯುವ ಜನಾಂಗವು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹೇಳಿದರು.
ಅವರು ಕೊಪ್ಪಳದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ ನಿವಾಸದಲ್ಲಿ ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಫ.ಗು.ಹಳಕಟ್ಟಿಯವರ ಸಂಸ್ಮರಣಾ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ವಚನಗಳನ್ನು ಮುದ್ರಿಸಿದ ಕೀರ್ತಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಈ ರೀತಿ ಫ.ಗು.ಹಳ್ಳಕಟ್ಟಿಯವರು ೨೫೦ ವಚನಕಾರರ ಸಾಹಿತ್ಯವನ್ನು ಸಂಶೋಧಿಸಿ ಪ್ರಕಟಿಸಿದರು. ಸರ್ಕಾರವು ಜುಲೈ ೨ರಂದು ‘ವಚನ ಸಾಹಿತ್ಯ ಸಂರಕ್ಷಣಾ ದಿನ’ವಾಗಿ ಘೋಷಿಸುವ ಮೂಲಕ ಅವರಿಗೆ ಗೌರವಾರ್ಪಣೆ ಸಲ್ಲಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಫ.ಗು.ಹಳಕಟ್ಟಿಯವರು ಮೂಲ ವಿಜಯಪುರ ಜಿಲ್ಲೆಯವರಾಗಿದ್ದರೂ ಅಖಂಡ ಕರ್ನಾಟಕದಲ್ಲಿ ವಚನ ಸಾಹಿತ್ಯದ ಶ್ರೀಮಂತಿಕೆಯನ್ನು ಮರೆಸಿದ್ದಾರೆ. ದೇಶದಾದ್ಯಂತ ಅವರ ವಚನ ಸಾಹಿತ್ಯದ ಕೊಡುಗೆ ಅಮೋಘವಾಗಿದೆ ಎಂದರು.
ಸಮಾರAಭದ ಮುಖ್ಯ ಅತಿಥಿಗಳಾದ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡುತ್ತಾ, ವಚನ ಸಾಹಿತ್ಯದ ಪಿತಾಮಹರೆಂದೇ ಗುರುತಿಸಲ್ಪಟ್ಟಿರುವ ಫ.ಗು.ಹಳಕಟ್ಟಿಯವರ ಸಂಸ್ಮರಣೆಯನ್ನು ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿದ್ದು, ವಚನ ಸಾಹಿತ್ಯಾಸಕ್ತರಿಗೆ ಅತ್ಯಂತ ಹೆಮ್ಮೆ ಮತ್ತು ಗೌರವದ ಸಂಗತಿಯಾಗಿದೆ. ಅವರ ಸರಳ ಮತ್ತು ಆದರ್ಶ ಜೀವನವನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನ್ನೆಡದಲ್ಲಿ ವಚನ ಸಾಹಿತ್ಯಕ್ಕೆ ನಾವು ಕೊಡುವ ಗೌರವವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಸಕ್ತಿಯನ್ನು ವಹಿಸಿ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿಯವರು ಮಾತನಾಡುತ್ತಾ, ಫ.ಗು.ಹಳಕಟ್ಟಿಯವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಆಗು ಹೋಗುಗಳ ಕುರಿತು ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ‘ನವಕರ್ನಾಟಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಕರ್ನಾಟಕ ಏಕೀಕರಣಕ್ಕೆ ಅವರ ಅಮೂಲ್ಯ ಕೊಡುಗೆಯಾಗಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷೆ ಸಾವಿತ್ರಿ ಮುಜುಮದಾರ ವಿಶೇಷ ಉಪನ್ಯಾಸನ ನೀಡಿ ಮಾತನಾಡುತ್ತಾ, ಫ.ಗು.ಹಳಕಟ್ಟಿಯವರು ವಿಜಯಪುರ ನಗರಸಭೆ ಅಧ್ಯಕ್ಷರಾದಾಗ ಬೆಳೆಯುತ್ತಿರುವ ನಗರಕ್ಕೆ ಕುಡಿಯುವ ನೀರು ಒದಗಿಸಲು ಸರ್.ಎಂ.ವಿಶ್ವೇಶ್ವರಯ್ಯನವರನ್ನು ಕರೆಯಿಸಿ, ಅವರ ತಾಂತ್ರಿಕ ಸಹಾಯ ಪಡೆದು ನಗರದ ಹೊರವಲಯದಲ್ಲಿ ಭೂತನಾಳ ಕೆರೆಯನ್ನು ಸ್ಥಾಪಿಸಿದ್ದು, ಅವರ ದೂರದೃಷ್ಟಿಗೆ ಸಾಕ್ಷಿ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಎಸ್.ಗೋನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶರಣ ಸಾಹಿತ್ಯ ಪರಿಷತ್ತಿನ ಮತ್ತು ಕದಳಿ ವೇದಿಕೆಯ ಸಭಾಭವನವನ್ನು ನಿರ್ಮಿಸಲು ನಿವೇಶನವನ್ನು ಪಡೆಯುತ್ತಿದ್ದು, ಶೀಘ್ರವೇ ಇದಕ್ಕೆ ಅಡಿಗಲ್ಲು ಸಮಾರಂಭವನ್ನು ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಕೊಪ್ಪಳದ ಮಹಾಜನತೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಉಮೇಶಬಾಬು ಸುರ್ವೆ ಅವರು ಮಾತನಾಡುತ್ತಾ, ಮಹಾಮನೆ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆದುಕೊಂಡು ಅಖಂಡ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತನ್ನು ಹೆಮ್ಮರವಾಗಿ ಬೆಳೆಸಲು ಸಾರ್ವಜನಿಕರ ಸಹಾಯ, ಸಹಕಾರ ಅಗತ್ಯವೆಂದರು.
ವೇದಿಕೆ ಮೇಲೆ ನಗರಸಭೆ ಸದಸ್ಯರಾದ ಬಸಮ್ಮ ದಿವಟರ, ವಿಜಯಾ ಬಳ್ಳೊಳ್ಳಿ, ವಾಣಿಶ್ರಿ ಮಠದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರನ್ನು ಸನ್ಮಾನಿಸಲಾಯಿತು. ಪಾರ್ವತಿ ಪಾಟೀಲ್ ಹಾಗೂ ಹೇಮಾ ಬಳ್ಳಾರಿಯವರು ಪ್ರಾರ್ಥಿಸಿದರು. ಸೌಮ್ಯ ನಾಲವಾಡರವರು ಸ್ವಾಗತಿಸಿದರು. ಶಿಲ್ಪಾ ಸಸಿಮಠ ನಿರೂಪಿಸಿದರು. ಮುಖ್ಯೋಪಧ್ಯಾಯರಾದ ರೇಣುಕಾ ಸುರ್ವೆ ವಂದಿಸಿದರು.


Gadi Kannadiga

Leave a Reply