This is the title of the web page
This is the title of the web page

Please assign a menu to the primary menu location under menu

Local News

ಅಧ್ಯಾಪಕರ ಆಭಿವೃದ್ಧಿ ಕಾರ್ಯಕ್ರಮ


ಬೆಳಗಾವಿ : ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಐಕ್ಯೂಎಸಿ ವತಿಯಿಂದ ೧೯ ಜುಲೈ ೨೦೨೨ ರಿಂದ ೨೩ ಜುಲೈ ೨೦೨೨ ರ ವರೆಗೆ ಐದು ದಿನಗಳ “ಅಧ್ಯಾಪಕರ ಆಭಿವೃದ್ಧಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿದೆ.
ದಿನಾಂಕ ೧೯ ಜುಲೈ ೨೦೨೨ ರಂದು ಮೊದಲ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ವಾಮಿ ಮೋಕ್ಷಾತ್ಮಾನಂದಜಿ ಮಹಾರಾಜ, ರಾಮಕೃಷ್ಣ ಮಿಶನ್ ಆಶ್ರಮ, ಕಿಲ್ಲಾ, ಬೆಳಗಾವಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ಸೇವೆ ಮತ್ತು ಅದರ ರೂಪಾಂತರದ ಶಕ್ತಿ” ಎಂಬ ವಿಷಯದ ಕುರಿತು ಮಾತನಾಡುತ್ತ ಅಧ್ಯಾಪಕರು ತಮ್ಮ ಕೆಲಸವನ್ನು ವೃತ್ತಿ ಅಥವಾ ಕರ್ತವ್ಯ ಎಂದು ತಿಳಿಯದೆ ಸೇವೆ ಎಂದು ಪರಿಗಣಿಸಬೇಕು. ಅಧ್ಯಾಪಕರು ಜ್ಞಾನವಂತರಾಗಿರಬೇಕು, ಚಾರಿತ್ರö್ಯವಂತರಾಗಿರಬೇಕು, ಸರಳ ನಡೆನುಡಿ ಮತ್ತು ಸರಳ ಉಡುಗೆ ಧರಿಸಬೇಕು ಮತ್ತು ಸಂಸ್ಕಾರವಂತರಾಗಿರಬೇಕೆಂದು ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೆ ಧ್ಯಾನ ಮಾಡುವ ರೀತಿಯನ್ನು ತಿಳಸಿಕೊಡುವದರ ಜೊತೆಗೆ ಎಲ್ಲರನ್ನೂ ಧ್ಯಾನದಲ್ಲಿ ಮಗ್ನರಾಗುವಂತೆ ಮಾಡಿದರು.
ಪ್ರಾಚಾರ್ಯರಾದ ಡಾ. ಜ್ಯೋತಿ ಎಸ್. ಕವಳೇಕರ ಅವರು ಸ್ವಾಗತ ಮತ್ತು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕು. ಕಾವ್ಯ ಹೆಗಡೆ ಪ್ರಾರ್ಥಿಸಿದರು. ಶ್ರೀ.ವ್ಹಿ.ಕೆ. ಗಾಣಿಗೇರ ಅತಿಥಿಗಳನ್ನು ಪರಿಚಯಿಸಿದರು. ಡಾ. ಕೀರ್ತಿ ಬ್ಯಾಡಗಿ ವಂದಿಸಿದರು. ಮಿಸ್. ಸಮೃದ್ಧಿ ಬರವೆ ಕಾರ್ಯಕ್ರಮ ನಿರೂಪಣೆ ಮಾಡಿದರು.


Gadi Kannadiga

Leave a Reply