ಯರಗಟ್ಟಿ: ಜಾತ್ರೆಗಳು ಧರ್ಮವನ್ನು ಜೋಡಿಸುವ ಕೊಂಡಿಗಳಂತೆ ಕೆಲಸ ಮಾಡುತ್ತವೆ. ಇಲ್ಲಿ ಎಲ್ಲರೂ ಸಮಾನವಾಗಿ ಭಾಗಿಯಾಗುವ ಮೂಲಕ ಏಕತೆಯನ್ನು ಪ್ರದರ್ಶಿಸುತ್ತಾರೆ. ಹಾಗಾಗಿ, ಧರ್ಮ ಬೆಳೆದರೆ ಎಲ್ಲವೂ ಬೆಳೆಯುತ್ತವೆ ಎಂದು ಮಲ್ಲಾಪೂರ ಗಾಳೇಶ್ವರಮಠದ ಶ್ರೀ ಚಿದಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಜಾಲಿಕಟ್ಟಿ_ಜೀವಾಪೂರ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಜರುಗಿದ ಶ್ರೀ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿರಂತರವಾಗಿ ಜಾತ್ರೆಗಳು ನಡೆಯಬೇಕು ಅವಾಗ ಧರ್ಮ ಜಾಗೃತವಾಗುತ್ತದೆ ಎಂದರು.ಮುಂಜಾನೆಯಿಂದ ರುದ್ರಾಭೀಷೆಕ, ಪುಷ್ಪಾರ್ಪಣೆ, ಬಿಲ್ವಾರ್ಚನೆ, ಪಂಚಾಭೀಷೆಕ, ನೈವೇಧ್ಯ ಮಹಾ ಮಂಗಳಾರತಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಅನೇಕ ಕಡೆಯಿಂದ ಭಕ್ತರ ದಂಡು ಮೊಟಾರ ಸೈಕಲ್, ಎತ್ತಿನ ಬಂಡಿ, ಸೈಕಲ್, ರೀಕ್ಷಾ, ಟೆಂಫೊ ಟ್ರಾö್ಯಕ್ಷ್ ಹಾಗೂ ಪಾದಯಾತ್ರೆ ಮುಖಾಂತರ ಶ್ರೀ ಕ್ಷೇತ್ರದ ಕಡೆ ಆಗಮಿಸಿ ನೈವೆದ್ಯೆ, ಭಕ್ತಿಯ ಕಾಣಿಕೆ ಅಮರ್ಪಿಸಿ ಆಶೀರ್ವಾದ ಪಡೆದರು.
ಸಾಯಂಕಾಲ ಶ್ರೀ ಬಸವೇಶ್ವರ ರಥೋತ್ಸವು ಅಪಾರ ಭಕ್ತರ ಮಧ್ಯೆ ಹರ ಹರ ಮಹಾದೇವ ಎಂಬ ಘೋಷಣೆ ಮೊಳಗುತ್ತಿತ್ತು, ಅನೇಕ ಭಕ್ತರು ಕಾಯಿ, ಉತ್ತತ್ತಿ ಹಾಗೂ ಬಾಳೆಹಣ್ಣು ರಥೋತ್ಸವಕ್ಕೆ ಹಾರಿಸಿ ತಮ್ಮ ಭಕ್ತಿ ಮೆರೆದರು.