ಇಳಕಲ್ : ನಗರದಲ್ಲಿ ಹಲವಾರು ವರ್ಷಗಳಿಂದ ಉಚಿತ ಯೋಗ ಶಿಬಿರವನ್ನು ನಡೆಸುತ್ತಲೇ ಬಂದಿರುವ
ಇಲ್ಲಿನ ಯೋಗ ಕುಟುಂಬವು ಅವಳಿ ತಾಲ್ಲೂಕಿನಲ್ಲಿಯೇ ಹೆಸರುವಾಸಿ ಮತ್ತು ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಜನಪ್ರಿಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಸಂಘ ಹುಟ್ಟುವ ಮುಂಚೆ ಪ್ರಾರಂಭದಲ್ಲಿ ಯೋಗ ಗುರು ಸಂಗಮೇಶ ಬಂಡರಗಲ್ಲ ಅವರ ನೇತೃತ್ವದಲ್ಲಿ ಹವ್ಯಾಸವಾಗಿ ಗೆಳೆಯರ ಬಳಗವನ್ನು ಕಟ್ಟಿಕೊಂಡು ಪ್ರತಿನಿತ್ಯ ಯೋಗಾಸನ ಮಾಡುತ್ತಾ ಸಾಗಿತ್ತು. ಕಾಲಕಾಲಕ್ಕೆ ತಕ್ಕಂತೆ ಇದರ ಸದಪಯೋಗ ಪಡೆಯುವವರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಯೋಗ ಕುಟುಂಬ ಮತ್ತು ಸಾಂಸ್ಕೃತಿಕ ಕ್ರೀಡಾ ಅಭಿವೃದ್ಧಿ ಸಂಘ(ರಿ) ಎಂಬ ಸಂಘವನ್ನು ಹುಟ್ಟುಹಾಕಿ ನಗರದ ಗಣ್ಯರು, ಮಾಜಿ ಶಾಸಕರು, ಉದ್ಯಮಿದಾರರು ಇದರಲ್ಲಿ ಪಾಲ್ಗೊಂಡು ಸದಸ್ಯತ್ವವನ್ನು ಪಡೆದು ಅವರು ಕೂಡಾ ಈ ಸಂಘದ ಸಕ್ರೀಯ ಸದಸ್ಯರಾಗಿದ್ದಾರೆ ಎನ್ನುವುದಕ್ಕೆ ತುಂಬಾ ಹರ್ಷವಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ರವಿನಾರಾಯಣ ರಾಯಬಾಗಿ ಹೇಳಿದರು.
ನಗರದ ಬಸವಾ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಯೋಗ ಕುಟುಂಬದ ಪ್ಯಾಮಿಲಿ ಡೇ ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ
ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ಯೋಗದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು. ಪ್ರತಿನಿತ್ಯ ತಮ್ಮ ದೈನಂದಿನ ಬದುಕಿನ ಒತ್ತಡವು ತಮಗೆ ಹೊರೆಯಾಗಬಾರದೆಂದರೆ
ಯೋಗ ಅತ್ಯವಶ್ಯ ನಾನು ಕೂಡಾ ವಾರದಲ್ಲಿ ಎರಡು ದಿನವಾದರೂ ತಮ್ಮ ಯೋಗ ಕುಟುಂಬದಲ್ಲಿ ಯೋಗಾಸನದಲ್ಲಿ ಪಾಲ್ಗೊಳ್ಳುತ್ತೇನೆ ಮತ್ತು ನಿಮ್ಮ ಸಂಘದ ಜೊತೆಗೆ ನನ್ನ ಸಹಾಯ ಸಹಕಾರ ಯಾವಾಗಲು ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಚಿತ್ತರಗಿ ಶ್ರೀ ಗುರುಮಹಾಂತ ಸ್ವಾಮಿಗಳು ವಹಿಸಿದ್ದರು. ಯೋಗ ಕುಟುಂಬ ಸದಸ್ಯರು ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷ ಚಂದ್ರಶೇಖರ ಸಜ್ಜನ, ಅಧ್ಯಕ್ಷ ಸಂಗಮೇಶ ಬಂಡರಗಲ್, ಉಪಾಧ್ಯಕ್ಷ ರಾಘವೇಂದ್ರ ರಾಜೋಳ್ಳಿ, ಕಾರ್ಯದರ್ಶಿ ರವಿನಾರಾಯಣ ರಾಯಬಾಗಿ, ರವಿಶಂಕರ ಬಸವಾ, ಭರತ ಬೋರಾ ಮತ್ತಿತರರು ಉಪಸ್ಥಿತಿರಿದ್ದರು.
ವರದಿ : ನಾಗರಾಜ ನಗರಿ