ಕುಷ್ಟಗಿ:- ನಗರದ ವಾರ್ಡ್ ನಂ.5 ರಲ್ಲಿ ನೀಲಮ್ಮ ರಾಮಣ್ಣ ಹಾಬಲಕಟ್ಟಿ,ಕುಟುಂಬ ವಾಸವಿದ್ದ,ಮಣ್ಣಿನ ಹಾಗೂ ತಗಡಿನ ಸೀಟುಗಳುಳ್ಳ ಮನೆ ಇತ್ತೀಚಿಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಾಗಶಃ ಬಿದ್ದಿದೆ.
ಮೂವರು ಗಂಡು ಮಕ್ಕಳ ಪೈಕಿ,ಕುಟುಂಬ ನಿರ್ವಹಣೆಗಾಗಿ ಕುಟುಂಬ ಸಮೇತ ಮಂಗಳೂರು ಬೆಂಗಳೂರಿಗೆ ಗುಳೆ ಹೋಗುತ್ತಾರೆ.ಕಿರಿಯ ಮಗ ಮೂರು ವರ್ಷಗಳ ಹಿಂದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಚಿಂತೆಗೀಡಾದ ನೀಲಮ್ಮ ಪಾರ್ಶ್ವ ವಾಯುಪೀಡಿತಳಾಗಿದ್ದು ಬಡ ಕುಟುಂಬಕ್ಕೆ ಇದ್ದ ಸೂರೊಂದು ಭಾರಿ ಮಳೆಗೆ ಆಹುತಿಯಾಗಿದೆ.
ಈ ಕೂಡಲೇ ಸ್ಥಳೀಯ ಪುರಸಭೆಯ ಮತ್ತು ಕುಷ್ಟಗಿ ಕಂದಾಯ ಹೋಬಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಮುಂದಾಗಬೇಕು ಎಂದು ವಾರ್ಡಿನ ಯುವ ಮುಖಂಡ ಹಾಗೂ ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಕಾರ್ಯಾಧ್ಯಕ್ಷ ಕಿರಣ ಜ್ಯೋತಿ ಒತ್ತಾಯಿಸಿದ್ದಾರೆ.
ಮೂರು ದಿನಗಳ ಹಿಂದೆಯೆ ಮಳೆಗೆ ಕುಸಿದು ಬಿದ್ದ ಮನೆಯ ಸ್ಥಳ ಪರಿಶೀಲಿಸಿ ಬಡ ಕುಟುಂಬದ ಅಳಲು ಆಲಿಸದ ಸಂಬಂಧಿಸಿದ ವಾರ್ಡಿನ ಸದಸ್ಯ, ಪುರಸಭೆ ಹಾಗೂ ಕಂದಾಯ ಅಧಿಕಾರಿಗಳ ನಡೆಗೆ ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ