ಬೆಳಗಾವಿ: ಅಭಿಮಾನಿಗಳ ದೇವರೆಂದೇ ಖ್ಯಾತಿಯಾದ ನಟ ಡಾ.ಪುನೀತ ರಾಜಕುಮಾರ ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನವಾಗುತ್ತಿದ್ದು ಇದೀಗ ಪರಭಾಷೆ ಸಿನಿಮಾ ಪ್ರದರ್ಶನಕ್ಕಾಗಿ ಜೇಮ್ಸ್ ಸಿನೇಮಾವಬ್ಬು ಚಿತ್ರಮಂದಿರಗಳಿಂದ ತೆಗೆಯುತ್ತಿದ್ದು ಯಾವುದೇ ಕಾರಣಕ್ಕೂ ಅಪ್ಪು ಚಿತ್ರವನ್ನು ತೆಗೆಯಬಾರದೆಂದು ಪುನೀತ್ ಅಭಿಮಾನಿಗಳು ಬೆಳಗಾವಿಯಲ್ಲಿ ಆಗ್ರಹಿಸಿದ್ದಾರೆ.
ನಗರದ ಚಿತ್ರಾ ಮಂದಿರದ ಎದುರಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು, ಪರಭಾಷೆಯ ಆರ್ ಆರ್ ಆರ್ ಚಿತ್ರವು ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಡಾ. ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರವನ್ನು ಚಿತ್ರಮಂದಿರದ ಮಾಲಿಕರು ತೆಗೆದುಹಾಕಲು ಮುಂದಾಗಿದ್ದಾರೆ. ಜೇಮ್ಸ್ ಅಪ್ಪುವಿನ ಕೊನೆಯ ಚಿತ್ರವಾಗಿದ್ದು ಇನ್ನೂ ಹೌಸ್ ಪುಲ್ ಪ್ರದರ್ಶನಗೊಳ್ಳುತ್ತಿದೆ. ಅಭಿಮಾನಿಗಳು ಟಿಕೇಟಗಾಗಿ ಪರದಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಚಿತ್ರವನ್ನು ಅದನ್ನು ತೆಗೆದು ಹಾಕುವ ಹುನ್ನಾರ ಮಾಡಬಾರದೆಂದು ಆಗ್ರಹಿಸಿದ್ದಾರೆ.
ಪರಭಾಷೆಯ ಸಿನಿಮಾಗೆ ಪ್ರದರ್ಶನಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ ಅದರಲ್ಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಸಿನಿಮಾ ತೆಗೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.