ಬಳ್ಳಾರಿ (೧೬)ಜಿಲ್ಲೆಯಲ್ಲಿ ರೈತರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಹೌದು! ಈ ವರ್ಷ ಅತೀಯಾದ ಮಳೆಯಿಂದ ಬೆಳೆ ಹಾ£ಯಾಗಿ ರೈತ ಕಂಗಾಲಾಗಿದ್ದು ಆನೇಕ ಜನ ರೈತರು ಸಾಲಭಾದೆ ತಾಳಲಾರದೆ ಸಾವಿನ ದಾರಿ ಹಿಡಿದಿದ್ದಾರೆ. ಇದಕ್ಕೆ ಕೈಗನ್ನಡಿಯಂತೆ ಬಳ್ಳಾರಿ ತಾಲೂಕಿನ ಬೊಬ್ಬಕುಂಟೆ ಗ್ರಾಮದ ರೈತ ಕೆ.ಹನುಮಂತರಾಯ (೪೦) ವರ್ಷ ಈತ ತನ್ನ ಆರು ಎಕರೆ ಹೊಲಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದ ಆದರೆ ಈ ವರ್ಷ ಅತೀಯಾದ ಮಳೆಯಾದ ಕಾರಣ ರೈತರ ಬೆಳೆಗಳು ಹಾಳಾಗಿದ್ದು ಈತನ ಆರು ಎಕರೆ ಬೆಳೆ ಕೂಡ ಹಾಳಾಗಿದ್ದು ಇತ್ತ ಬೆಳೆಯೂ ಕೈ ಸೇರದೆ ಅತ್ತ ಸಾಲಗಾರರ ಕಾಟ ತಾಳಲಾರದೆ ಮಂಗಳವಾರ ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ಹೊಲಕ್ಕೆ ಹೊಡೆಯುವ ಔಷಧಿ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನ್ನ ಆರು ಎಕರೆ ಜಮೀ£ನಲ್ಲಿ ಮೆಣಸಿನಕಾಯಿ ಹಾಗೂ ಮೆಕ್ಕೆ ಜೋಳ ಬೆಳೆದಿದ್ದು ಬೆಳೆ ನಷ್ಟವಾಗಿದ್ದು ಲಕ್ಷಾಂತರ ರೂ. ಸಾಲ ಮಾಡಿದ್ದು ರೈತ ಹನುಮಂತರಾಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೊಳಗಾದ ಹನುಮಂತರಾಯ ನನ್ನ ಚಿಕಿತ್ಸೆಗಾಗಿ ವಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ £ನ್ನೆ ಮಧ್ಯ ರಾತ್ರಿ ೨ ಗಂಟೆಗೆ ರೈತ ಹನುಮಂತರಾಯ ಮೃತ ಪಟ್ಟಿದ್ದಾನೆ.
ಇನ್ನು ಮೃತ ರೈತ£ಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗ ಇದ್ದು ಬಳ್ಳಾರಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬವನ್ನು ಸರ್ಕಾರದ ಅಧಿಕಾರಿಗಳು ಹೋಗಿ ಮಾತನಾಡಿಸುವ ಪ್ರಯತ್ನ ಆಗಿಲ್ಲ ಎಂದು ತಿಳಿದು ಬಂದಿದೆ.
Gadi Kannadiga > State > ಸಾಲ ಭಾದೆ ರೈತ ಆತ್ಮಹತ್ಯೆ!
More important news
ರೈತ ಬಾಂಧವರ ಗಮನಕ್ಕೆ
07/02/2023
ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
07/02/2023
ಐತಿಹಾಸಿಕ ಲಕ್ಕುಂಡಿ ಉತ್ಸವ : ಮಹಿಳಾ ಗೋಷ್ಟಿ
07/02/2023