This is the title of the web page
This is the title of the web page

Please assign a menu to the primary menu location under menu

Local News

ಖಾಸಗಿ ತರಕಾರಿ ಮಾರುಕಟ್ಟೆ ರದ್ದು ಮತ್ತು ಬೆಂಬಲ ಬೆಲೆಗೆ ಆಗ್ರಹಿಸಿ ರೈತ ಪ್ರತಿಭಟನೆ


ಬೆಳಗಾವಿ: ಬೆಳಗಾವಿ ಖಾಸಗಿ ಮಾರುಕಟ್ಟೆಯನ್ನು ರದ್ದುಗೊಳಿಸಬೇಕು ಮತ್ತು ರೈತರ ಬೆಳೆಗೆ ಕೇಂದ್ರದಿಂದ ಕನಿಷ್ಟ ಬೆಂಬಲ ಬೆಲೆ ಜಾರಿಗೆ ತರಬೇಕೆಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ ಬೆಳಗಾವಿಯಿಂದ ತರಕಾರಿ ಮಾರುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಬುದುವಾರ ಜಿಲ್ಲಾ ಪಂಚಾಯತ್ ಪಕ್ಕದಲ್ಲಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿ ಎದರಿಗೆ ರೈತರು ತರಕಾರಿ ಮಾರುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಖಾಸಗಿಕರಣದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗಾವಿಯಲ್ಲಿ ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಿದ್ದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಗ್ರಾಹಕರಿಲ್ಲದೆ ರೈತರು ಹೈರಾಣಾಗುತ್ತಿದ್ದಾರೆ, ಇನ್ನು ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸರಕಾರಗಳು ರೈತರ ಬೆಂಬಲಕ್ಕೆ ನಿಲ್ಲದೆ ರೈತರನ್ನೆ ಕಿತ್ತು ತಿನ್ನುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ವೇಳೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದನಗೌಡ ಮೋದಗಿ ಅವರು ಮಾತನಾಡಿ ಖಾಸಗಿಕರಣ ವಿರೋಧಿಸಿ ಮತ್ತು ಕೇಂದ್ರದ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ರೈತ ವಿರೋಧಿ ನೀತಿಗಳನ್ನು ಕೇಂದ್ರ ಸರಕಾರ ಹಿಂಪಡೆದರೂ ರಾಜ್ಯ ಸರಕಾರ ಹಿಂಪಡೆಯುತ್ತಿಲ್ಲ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇನ್ನು ಬೆಳಗಾವಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿದ್ದು ಎಪಿಎಂಸಿಯಲ್ಲಿ ರೈತರು ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಮಾರುಕಟ್ಟೆ ರದ್ದು ಮಾಡಿ ಬೆಂಬಲ ಬೆಲೆ ಘೋಷಣೆ ಮಾಡುವವರೆಗೂ ಬೆಳಗಾವಿಯ ಪ್ರತಿಯೊಬ್ಬ ಶಾಸಕ, ಸಚಿವರ ಮನೆಗಳ ಮುಂದೆ ತರಕಾರಿ ವ್ಯಾಪಾರ ಮಾಡಿ ಪ್ರತಿಭಟನೆ ಮಾಡುತ್ತೆವೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಕೃಷಿ ಸಮಾಜದ ಪದಾಧಿಕಾರಿಗಳು, ರೈತಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Gadi Kannadiga

Leave a Reply