This is the title of the web page
This is the title of the web page

Please assign a menu to the primary menu location under menu

State

ರೈತರು ಮೋಸ ಹೋಗಬಾರದು-ಡಾ.ತೋಂಟದ ಸಿದ್ಧರಾಮ ಶ್ರೀಗಳು


ಗದಗ ಪರಿಸರದ ಹಳ್ಳಿಗುಡಿ ಪ್ರದೇಶದಲ್ಲಿ ರೈತರಿಗೆ ಹಣದ ಆಮಿಷ ತೋರಿಸಿ ಫಲವತ್ತಾದ ಭೂಮಿಯನ್ನು ಕಬಳಿಸಲು ಬಂಡವಾಳಶಾಹಿಗಳು ಹುನ್ನಾರ ನಡೆಸಿರುವುದು ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ವರದಿ ಯಾಗಿದೆ. ರೈತರು ಬಂಡವಾ¼ Àಶಾಹಿಗಳ ಯಾವ ಆಮಿಷಕ್ಕೂ ಒಳಗಾಗಬಾರದು. ಪರಿಸರವನ್ನು ಹಾಳು ಮಾಡುವ ಉದ್ದಿಮೆ ಗಳಿಂದ ಜನಜೀವನದ ಮೇಲೆ ವಿಪರೀತ ಪರಿಣಾಮ ಉಂಟಾ ಗುವುದರಿಂದ ರೈತರು ಎಚ್ಚರ ವಹಿಸಬೇಕು ಎಂದು ಗದಗ-ಡಂಬಳ ಜಗದ್ಗುರು ತೋಂಟ ದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪತ್ರಿಕೆಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಗಾರದ ಬೆಳೆ ಬೆಳೆಯುವ ಫಲವತ್ತಾದ ಭೂಮಿಯನ್ನು ಹಣದಾಸೆಗಾಗಿ ಕಳೆದುಕೊಂಡ ರೈತರು ಭವಿಷ್ಯದಲ್ಲಿ ಪರಿತಪಿ ಸಬೇಕಾಗುತ್ತದೆ. ದುಡಿದು ಒಡಲು ತುಂಬಿಕೊಳ್ಳಲು ಸದಾ ಆಶೀರ್ವಾದ ಮಾಡುವ ಭೂತಾಯಿಯನ್ನು ಹಣದಾ ಸೆಗಾಗಿ ಮಾರಿಕೊಳ್ಳುವುದು ಬೇಡ. ಭೂತಾಯಿ ನಮ್ಮ ಅಸ್ಮಿತೆ. ನೆಲ, ಜಲ, ಪರಿಸರ ರಕ್ಷಣೆ ನಮ್ಮ ಹೊಣೆ. ನಾವು ನಮ್ಮ ಭವಿಷ್ಯದ ಪೀಳಿಗೆಗಾಗಿ ಈ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳಬಾರದು. ದಲ್ಲಾಳಿಗಳ ಮೋಸದ ಮಾತಿಗೆ ಮರುಳಾಗ ಬಾರದು. ಕೈಗಾರಿಕೆಗಳಿಂದ ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ಜನರ ಬದುಕು ದುಸ್ತರವಾಗಿಸುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಶ್ರೀಗಳು ರೈತ ಸಮುದಾಯಕ್ಕೆ ಸೂಚ್ಯವಾಗಿ ತಿಳಿಸಿದ್ದಾರೆ. ಈ ಭಾಗದ ಪರಿಸರ ಪ್ರೇಮಿಗಳು, ಸಮಾಜಮುಖಿ ಸಂಘಟನೆಗಳು ಹಾಗೂ ರೈತಪರ ಕಾಳಜಿಯುಳ್ಳ ಸಂಘಟನೆಗಳು ಮೊದಲಿನಿಂದಲೂ ಡಾ. ತೋಂಟದ ಸಿದ್ಧಲಿಂಗ ಮಹಾ ಸ್ವಾಮಿಗಳವರ ನೇತೃತ್ವದಲ್ಲಿ ರೈತಹಿತ ಚಿಂತನೆ ಮಾಡುತ್ತ ಬಂದಿದ್ದು, ಸಂದರ್ಭ ಬಂದರೆ ಈಗಲೂ ಕೈಗಾರಿಕೆಗಳಿಂದಾಗುವ ಜನಹಾನಿಯನ್ನು ತಪ್ಪಿಸಲು ಮುಂದಾಗಬೇಕೆAದು ಶ್ರೀಗಳು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.


Gadi Kannadiga

Leave a Reply