This is the title of the web page
This is the title of the web page

Please assign a menu to the primary menu location under menu

Local News

ಲಂಚ ಸ್ವೀಕಾರ: ಎಫ್‌ಡಿಎ ಎಸಿಬಿ ಬಲೆಗೆ


ಬೆಳಗಾವಿ,ಜುಲೈ೧೪: ಜಮಖಂಡಿ ತಾಲೂಕಿನ ಗೋಠೆಯ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ಕಳೆದ ೩೦ ವರ್ಷಗಳಿಂದ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಸ್.ಕುಳಲಿ ಅನ್ನುವವರ ಹೆಚ್ಚುವರಿ ವೇತನ ಬಡ್ತಿ ಆದೇಶ ಮಾಡಿಸಿದ್ದರ ಬಗ್ಗೆ ೨೦೦೦ ಸಾವಿರ ಲಂಚ ಪಡೆದುಕೊಳ್ಳುತ್ತಿದ್ದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೆ.ಎಸ್.ಕುಳಲಿ ಅವರಿಂದ ಗುರುವಾರ(ಜುಲೈ೧೪) ೨೦೦೦ ಲಂಚ ಪಡೆದುಕೊಳ್ಳುತ್ತಿದ್ದ ಬೆಳಗಾವಿ ವಿಭಾಗದ ವಿಭಾಗೀಯ ಸಹ ನಿರ್ದೇಶಕರ ಕಚೇರಿ, ಆಡಳಿತಾಧಿಕಾರಿಗಳು ವಿಭಾಗೀಯ ಸಹ ನಿರ್ದೇಶಕರ ಕಚೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಬೀಮರಾವ್ ಈರಪ್ಪ ಮಾದರ ಎಸಿಬಿ ಅಧಿಕಾರಿಗಳಿಗೆ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದಾರೆ.
೨ಸಾವಿರ ರೂಪಾಯಿಗÀಳ ಲಂಚದ ಹಣವನ್ನು ಪೋನ್-ಪೇ ಮುಖಾಂತರ ಸ್ವೀಕರಿಸಿದ್ದು, ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ನಂತರ ಆಪಾದಿತನ ಮೊಬೈಲ್ ಪೋನ್ ಅನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ.
ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಜೆ.ಎಮ್. ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರವರು ದಾಖಲಿಸಿಕೊಂಡಿರುತ್ತಾರೆ. .ಎ.ಎಸ್.ಗೂದಿಗೊಪ್ಪ, ಪೊಲೀಸ್ ನಿರೀಕ್ಷಕರು ಹಾಗೂ ಬೆಳಗಾವಿ ಎಸಿಬಿ ಠಾಣೆಯ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ತೊಡಗಿದ್ದರು.


Gadi Kannadiga

Leave a Reply