ಬೆಳಗಾವಿ ಸುವರ್ಣಸೌಧ,ಡಿ.೨೮: ಪ್ರವರ್ಗ-೧ ರ ಹಿಂದುಳಿದ ವರ್ಗಗಳ ವಿಧ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳಲ್ಲಿ ಶೇ ೬೫ ಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ವಿದಾರ್ಥಿಗಳಿಗೆ ಐದು ವಿಧಧ ಶುಲ್ಕಗಳನ್ನು ಮರುಪಾವತಿ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು
ಹಿರಿಯೂರು ಶಾಸಕರಾದ ಶ್ರೀಮತಿ ಕೆ. ಪೂರ್ಣಿಮ ಅವರು, ಪ್ರವರ್ಗ ೧ರಡಿ ಬರುವ ವಿಧ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶೈಕ್ಷಣಿಕ ವಿನಾಯಿತಿಯನ್ನುಪ್ರವರ್ಗ ೧ ರ ವಿದಾರ್ಥಿಗಳಿಗೂ ನೀಡಲಾಗುತ್ತಿದೆಯೇ ಹಾಗೂ ಯೂನಿವರ್ಸಿಟಿ ಹಾಸ್ಟೆಲ್ ಸೌಲಭ್ಯ ಹಾಗೂ ಪಿ ಹೆಚ್‌ಡಿ ವಿದ್ಯಾರ್ಥಿಗಳಿಗೆ ಸ್ಟೆöÊಪಂಡ್ ನೀಡಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
ಮೆಟ್ರಿಕ್ ನಂತರದ ವಿಧ್ಯಾರ್ಥಿಗಳಿಗೆ ಬೋಧನಾಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕಗಳನ್ನು ಮರು ಪಾವತಿ ಮಾಡಲಾಗುತ್ತಿದ್ದು, ಪ್ರಾಶಸ್ತö್ಯದ ಆಧಾರದ ಮೇಲೆ ಉಳಿದ ಸೌಲಭ್ಯಗಳನ್ನು ನೀಡಲಾಗುವುದೆಂದರು.
Gadi Kannadiga > Local News > ಪ್ರವರ್ಗ ೧ ರ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕೋಟಾ ಶ್ರೀನಿವಾಸ ಪೂಜಾರಿ