ಕೊಪ್ಪಳ ಜನವರಿ ೧೨ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಲಾತಂಡದ ಮೂಲಕ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಾಬಲಕಟ್ಟಿ ಹಾಗೂ ವಿವಿಧ ಗ್ರಾಮಗಳಲ್ಲಿ ಸಂಭ್ರಮದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು.
ಕಲ್ಪಿತರು ಸಾಂಸ್ಕೃತಿ ಯುವಕ ಸಂಘ(ರಿ) ಹಾಬಲಕಟ್ಟಿ ಕಲಾತಂಡದವರು ಜಾನಪದ ಸಂಗೀತ ಕಾರ್ಯಕ್ರಮದ ಮೂಲಕ ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಹಾಬಲಕಟ್ಟಿ ಗ್ರಾ.ಪಂ ಉಪಾಧ್ಯಕ್ಷರಾದ ಪರುಶುರಾಮ ಮುಗಳಿ ಅವರು ತಮಟೆ ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾ.ಪಂ ಮಾಜಿ ಸದಸ್ಯರಾದ ಸತ್ಯಪ್ಪ ರಾಜೂರ, ಕಲಾತಂಡದ ಮುಖ್ಯಸ್ಥ ದಾವಲಸಾಬ ಅತ್ತಾರ ಸೇರಿದಂತೆ ಗ್ರಾಮದ ಗುರು ಹಿರಿಯರು, ಜನಪ್ರತಿನಿದಿಗಳು ಉಪಸ್ಥಿತರಿದ್ದರು.
ಬಳಿಕ ಕಲ್ಪಿತರು ಸಾಂಸ್ಕೃತಿ ಯುವಕ ಸಂಘ(ರಿ) ಹಾಬಲಕಟ್ಟಿ ಕಲಾತಂಡದ ದಾವಲಸಾಬ ಅತ್ತಾರ ಹಾಗೂ ಸಂಗಡಿಗರು ಕೋನಾಪುರ, ಜಾಹಗೀರಗುಡದೂರ, ಗೊರೆಬಿಹಾಳ ಹಾಗೂ ವಿವಿಧ ಗ್ರಾಮಗಳಲ್ಲಿ ಜಾನಪದ ಸಂಗೀತ ಕಾರ್ಯಕ್ರಮಗಳು ನಡೆದವು. ಅಲ್ಲದೇ ಕುಷ್ಟಗಿ ತಾಲ್ಲೂಕಿನ ಆಯ್ದ ವಿವಿಧ ಗ್ರಾಮಗಳಲ್ಲಿ ಜ. ೧೪ ರವರೆಗೆ ಕಾರ್ಯಕ್ರಮಗಳು ನಡೆಯಲಿವೆ.
Gadi Kannadiga > State > ಹಾಬಲಕಟ್ಟಿ ಹಾಗೂ ವಿವಿಧ ಗ್ರಾಮಗಳಲ್ಲಿ ಸಂಭ್ರಮದ ಜಾನಪದ ಸಂಗೀತ ಕಾರ್ಯಕ್ರಮ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023