ಗೋಕಾಕ್ ನಗರದ ಬಗಲಿ ಕುಟುಂಬ, ಇಂದು ಶನಿವಾರ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ತಮಗೆ ಆದ ಅನ್ಯಾಯವನ್ನು ಮಾದ್ಯಮಗಳ ಜೊತೆ ಹಂಚಿಕೊಂಡಿತು…
ಗೋಕಾಕಿನ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳಿಂದ ತಮಗೆ ಆದ ಅನ್ಯಾಯದ ವಿರುದ್ಧ ಕುಟುಂಬ ಸದಸ್ಯರೆಲ್ಲ ನೋವಿನಿಂದ ಹೇಳಿಕೊಂಡು, ನಮಗೆ ನ್ಯಾಯ ಸಿಗಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದರು..
ನಮ್ಮ ಗಂಡಂದಿರು ಯಾವ ತಪ್ಪನ್ನೂ ಮಾಡಿಲ್ಲ, 17/7/2021 ರಲ್ಲಿ ಗೋಕಾಕ್ ದಲ್ಲಿ ಒಬ್ಬ ಯುವಕನ ಕೊಲೆಯಾಗಿ, ಕೊಲೆಗೆ ಸಂಬದಿಸಿದ 3 ಆರೋಪಿಗಳನ್ನು ಆವತ್ತೇ ಬಂಧಿಸಿದ್ದರು, ಆದರೆ 18 ತಾರೀಖಿನ ಅವರನ್ನು ಹೊರಗೆ ಬಿಟ್ಟು, 19 ತಾರೀಖಿನ ನಮ್ಮ ಗಂಡ ಹಾಗೂ ಮೈದನನ್ನ ಕೊಲೆ ಕೇಸ್ ಅಲ್ಲಿ ಬಂದಿಸಿ, ಇಲ್ಲಿವರೆಗೂ ಬಿಟ್ಟಿಲ್ಲ..
ಸ್ಥಳೀಯ ಸಿಪಿಐ, ಪಿಎಸ್ಐ ಹಾಗೂ ಪೊಲೀಸರು ಎಲ್ಲಾ ಸೇರಿ ಈ ಕೇಸ್ ನಿಂದ ನಿಮ್ಮ ಮಕ್ಕಳನ್ನು ಮುಕ್ತ ಗೊಳಿಸುತ್ತೇವೆಂದು ನಮ್ಮ ಮಾವನವರ ಕಡೆ ಮಾತಾಡಿ 15ಲಕ್ಷ ಬೇಡಿದ್ದರು, ನಾವು ಆಸ್ತಿ ಬಂಗಾರ ಎಲ್ಲವನ್ನೂ ಅಡವಿಟ್ಟು ಹೇಗೋ 15 ಲಕ್ಷ ಹೊಂದಿಸಿ ಕೊಟ್ಟೆವು..
ಆದರೂ ಕೂಡ ಇಲ್ಲಿವರೆಗೂ ನಮ್ಮ ಮನೆಯ ಗಂಡಸರನ್ನು ಬಿಟ್ಟಿಲ್ಲ.. ಇವತ್ತು ನಮ್ಮ ಕುಟುಂಬ ತುಂಬಾ ಕಷ್ಟದಲ್ಲಿದೆ ಇದಕ್ಕೆಲ್ಲಾ ಪೊಲೀಸರೇ ಕಾರಣ, ನಮ್ಮ ಕುಟುಂಬಕ್ಕೆ ಏನಾದರೂ ಆದರೆ ಅದಕ್ಕೆ ಗೋಕಾಕ್ ಪೊಲೀಸರೇ ಕಾರಣ ಎಂದು ಮನೆಯ ಸೋಸೆಯರಾದ ಲಕ್ಷ್ಮಿ ಮತ್ತು ರೇಣುಕಾ ಅಳುತ್ತಾ, ತಮ್ಮ ಕಷ್ಟ ಹೇಳಿಕೊಂಡರು..
ಇನ್ನೂ ಜೈಲಿನಲ್ಲಿದ್ದ ಆ ಹುಡುಗರ ತಂದೆ ಮಾತನಾಡಿ, ನಮ್ಮ ಮಕ್ಕಳಿಗೆ ಯಾವುದೇ ತನಿಖೆ ಮಾಡಲಿ, ಫೋನ್ ರೆಕಾರ್ಡ್ ತಗಿಸಲಿ, ಮಂಪರು ಪರೀಕ್ಷೆ ಮಾಡಲಿ, ಒಂದು ಸಣ್ಣ ಆರೋಪ ಬಂದರು ನಾವೆಲ್ಲ ನೇಣಿಗೆ ಶರಣಾಗುತ್ತೇವೆ ಎಂದರು..
ಬೇರೆಯವರು ಮಾಡಿದ ತಪ್ಪಿಗೆ ನಮ್ಮನು ಸಿಲುಕಿಸಿ ಚಿತ್ರಹಿಂಸೆ ಕೊಡುತ್ತಿದ್ದಾರೆ, 15 ಲಕ್ಷ ಹಣಾನು ಹೋಯ್ತು, ಮಕ್ಕಳೂ ಕೂಡ ಜೈಲು ಪಾಲಾದರು, ದಯಮಾಡಿ ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬದ ಹಿರಿಯ ಸಿದ್ದಪ್ಪ ಬಬಲಿ ಬೇಡಿಕೊಂಡರು.