ಕೊಪ್ಪಳ, ನವೆಂಬರ್ ೧೭ : ಜಿಲ್ಲಾ ಪಂಚಾಯತಿ ಪ್ರಾಯೋಜಿತ ಮೀನುಗಾರಿಕೆ ಇಲಾಖೆಯ ೨೦೨೨-೨೩ನೇ ಸಾಲಿನ ಜಿಲ್ಲಾ ವಲಯ ಯೋಜನೆಯಾದ ಪ್ರದರ್ಶನಗಳು ಮತ್ತು ತರಬೇತಿ ಯೋಜನೆಯಡಿ ಯಲಬುರ್ಗಾ ತಾಲ್ಲೂಕಿನ ಮಲಕಸಮುದ್ರ ಕೆರೆ ಅಂಚಿನಲ್ಲಿ ಬುಧವಾರ(ನ.೧೬) ದಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗಂಗಾವತಿಯ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರದೀಪ ದೊಡ್ಡಮನಿ ಹಾಗೂ ಕೊಪ್ಪಳ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ತಾಲ್ಲೂಕು ಮೀನುಗಾರಿಕೆ ಸಹಕಾರಿ ಸಂಘಗಳ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
Gadi Kannadiga > State > ಮೀನುಗಾರಿಕೆ ಇಲಾಖೆಯ ತರಬೇತಿ ಕಾರ್ಯಕ್ರಮ ಯಶಸ್ವಿ