This is the title of the web page
This is the title of the web page

Please assign a menu to the primary menu location under menu

State

ನಮ್ಮ ಮತಕ್ಕೆ ರಾಷ್ಟ್ರಪತಿಗಳ ಮತಕ್ಕೆ ಪ್ರಜಾಪ್ರಭುತ್ವದಲ್ಲಿ ಒಂದೇ ಮೌಲ್ಯ, ಕಡ್ಡಾಯವಾಗಿ ಮತದಾನ ಮಾಡಿ : ಎ. ಎನ್, ರವಿ


ರೋಣ ಎಪ್ರೀಲ್ ೧ :- ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ £ಮ್ಮ ಮತಕ್ಕೆ ಹಾಗೂ ರಾಷ್ಟ್ರಪತಿಗಳ ಮತಕ್ಕೆ ಒಂದೇ ಮೌಲ್ಯವಿದೆ ಇಲ್ಲಿ £Ãವು ಸಾಮಾನ್ಯರು ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆ ಅಂತಾ ಅವರಿಗೆ ಬೇರೆ ಮತದಾನ ಮೌಲ್ಯ ಇರುವುದಿಲ್ಲಾ ಎಲ್ಲರಿಗೂ ಒಂದೇ ಮೌಲ್ಯ ಇದೆ ಹಾಗಾಗಿ ಮತದಾನ ಮಾಡುವಾಗ £ಮ್ಮ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾನ ಮಾಡಿ ಅಂತಾ ರೋಣ ತಾಲೂಕ ಪಂಚಾಯತ ಕಾರ್ಯ £ರ್ವಾಹಕ ಅಧಿಕಾರಿ ಎ.ಎನ್.ರವಿ ಹೇಳಿದರು..
ರೋಣ ತಾಲೂಕಿನ ಹೊಳೆ ಮಣ್ಣೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿಯ ಬದು £ರ್ಮಾಣ ಹೂಳೆತ್ತುವ ಕಾಮಗಾರಿ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು ಮೇ ೧೦ ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತದೆ ಈ ಸಂದರ್ಭದಲ್ಲಿ £ಮ್ಮ ಮತವನ್ನು ಮಾರಿಕೊಳ್ಳದೇ £ಮ್ಮ ಅಭಿವೃದ್ಧಿ ಗೆ ಶ್ರಮಿಸುವವರಿಗೆ ಹಾಗೂ £ಮ್ಮ ಮಕ್ಕಳ ಜೀವನದ ಒಳಿತಿಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳಿದರು..
೮೦ ವರ್ಷ ಮೇಲ್ಪಟ್ಟ ಹಾಗೂ ದಿವ್ಯಾಂಗರಿಗೆ ಮನೆಯಿಂದಲೆ ಮತದಾನದ ವ್ಯವಸ್ಥೆ*
೨೦೨೩ ಚುನಾವಣೆಯಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗಾಗಿ ಹಾಗೂ ಮನೆಯನ್ನು ಬಿಟ್ಟು ಹೊರಗಡೆ ಬರಲು ಆಗದಂತಹ ವ್ಯಕ್ತಿಗಳಿಗೆ ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗವು ಅವಕಾಶ ಮಾಡಿಕೊಟ್ಟಿದೆ. ಚುನಾವಣಾ ಆಯೋಗ ಕಲ್ಪಿಸಿರುವ ಮನೆಯಲ್ಲಿಯೇ ಮತದಾನ ಮಾಡುವ ಸೌಲಭ್ಯದ ಕುರಿತು ಮಾಹಿತಿ £Ãಡಿದರು.
*ಮತದಾನದ ಹಕ್ಕು, ಅದೊಂದು ಹಬ್ಬ ಇದ್ದ ಹಾಗೆ* ಊರಿನ ಹಬ್ಬಕ್ಕೆ ಹೇಗೆ ಜನರನ್ನು ಕರಿಸಿಕೊಳ್ಳುತ್ತಿರೋ ಹಾಗೆ £ಮ್ಮ ಅಕ್ಕ ಪಕ್ಕದ ಮನೆಯವರು £ಮ್ಮ ಮನೆಯವರು ದುಡಿಯಲು ಅಥವಾ ಬೇರೆ ಯಾವ ಊರಲ್ಲಿ ಆದರೂ ಕೆಲಸ ಮಾಡುತ್ತಿದ್ದರೆ ಅವರನ್ನು ಕರೆಸಿ ಮತದಾನ ಮಾಡಿಸಿ ಅಂದಾಗ ಮಾತ್ರ ೧೦೦% ಮತದಾನ ಆಗಲು ಸಾಧ್ಯ ಯಾವಾಗ ಪ್ರಜಾಪ್ರಭುತ್ವದಲ್ಲಿ ಶೇ ೧೦೦% ಮತದಾನ ಅಗುತ್ತೋ ಅವಾಗ ಯೋಗ್ಯ ವ್ಯಕ್ತಿಯ ಆಯ್ಕೆ ಆಗುತ್ತದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದರು..
*ಪ್ರಪಂಚದಲ್ಲಿ ನರೇಗಾ ಯೋಜನೆಯಂತಹ ಯೋಜನೆ ಯಾವುದು ಇಲ್ಲಾ*
ಈಡಿ ಪ್ರಪಂಚದಲ್ಲಿ ನರೇಗಾ ಯೋಜನೆಯಂತಹ ಯೋಜನೆ ಮತ್ತೊಂದಿಲ್ಲಾ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಯಶಸ್ಸು ನರೇಗಾ ಯೋಜನೆಯ ಮೇಲೆ £ಂತಿದೆ. ಎಪ್ರಿಲ್ ೧ ಆರ್ಥಿಕ ವರ್ಷದ ಮೊದಲ ದಿನ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು, ಕೆಲಸ ಮಾಡಿದ ಕೈಗಳಿಗೆ ಒಂದು ಪ್ರಮಾಣದ ಕೂಲಿ ಕೊಡಬೇಕು ಅದನ್ನು ನರೇಗಾ ಯೋಜನೆಯು ಮಾಡ್ತಾ ಇದೆ.
ಜಗತ್ತಿನಲ್ಲಿ ದುಡಿದು ತಿನ್ನುವ ತೃಪ್ತಿಯನ್ನು ಯಾವುದೇ ಅನ್ಯ ಮಾರ್ಗ ದಿಂದ ಬಂದ ಹಣ ಕೊಡುವುದಿಲ್ಲಾ. ಹಾಗಾಗಿ ಎಲ್ಲರೂ ದುಡಿದು ತಿನ್ನುವುದೇ ಶ್ರೇಷ್ಠ ನಾವು £ಮಗೆ ೧೦೦ ದಿನ ಕೆಲಸ ಕೊಡುತ್ತೇವೆ, ಮುಂಗಾರು ಮಳೆ ಆರಂಭವಾಗುವ ಮುನ್ನ ಆದಷ್ಟು ಹೆಚ್ಚು ಕೆಲಸ ಕೊಡುತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊಳೆ ಮಣ್ಣೂರ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ, ತಾಂತ್ರಿಕ ಸಂಯೋಜಕರಾದ ಪ್ರವೀಣ ಸೂಡಿ, ಐಇಸಿ ಸಂಯೋಜಕರಾದ ಮಂಜುನಾಥ, ಬಿ ಎಫ್ ಟಿ ಈರಣ್ಣ ದಳವಾಯಿ ಸೇರಿದಂತೆ ಹೊಳೆ ಮಣ್ಣೂರ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.


Leave a Reply