ಗದಗ ಮಾರ್ಚ ೨೧: ನರಗುಂದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಮಾಲ್ಕಿ ಮತ್ತು ನಾಗರಿಕ ಸೌಲಭ್ಯಕ್ಕೆ ಕಾಯ್ದಿರಿಸಿದ ಜಾಗೆ ರಿ.ಸ.ನಂ. ೨೬೯/ಬ ಪ್ಲಾಟ್ ನಂ. ೧೭೦ ಹಾಗೂ ರಿ.ಸ.ನಂ. ೧೬೭ ಪ್ಲಾಟ ನಂ. ೧೬೨ ಈ ಜಾಗೆಗಳನ್ನು ರಾಜ್ಯ ಸರಕಾರಿ ಇಲಾಖೆಗಳಿಗೆ ಮಂಜೂರಿಸಲು ಕರ್ನಾಟಕ ಪುರಸಭೆ ಅಧಿನಿಯಮ ಹಾಗೂ ಅಧಿಸೂಚನೆ ಪ್ರಕಾರ ಪುರಸಭೆ ಸಾಮಾನ್ಯ ಸಭೆ ಠರಾವು ಹಾಗೂ ಸಾಮಾನ್ಯ ಸಭೆಯಲ್ಲಿ ೩೦ ವರ್ಷಗಳ ಅವಧಿಗೆ ಮೀರದ ಹಾಗೆ ಲೀಜ್ ಆಧಾರದ ಮೇಲೆ ನಿವೇಶನಗಳನ್ನು ವಲಯ ಅರಣ್ಯಾಧಿಕಾರಿಗಳು ಗದಗ ಇಲಾಖೆಗೆ ಹಂಚಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಕುರಿತು ಯಾರಾದರೂ ಸಲಹೆ/ ಸೂಚನೆ / ಆಕ್ಷೇಪಣೆ ಇದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ ೧೫ ದಿನಗಳೊಳಗೆ ಲಿಖಿತವಾಗಿ ನರಗುಂದ ಪುರಸಭೆಗೆ ಸಲ್ಲಿಸಬಹುದಾಗಿದೆ ಎಂದು ನರಗುಂದ ಪುರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನರಗುಂದ ಪುರಸಭೆ ಕಾರ್ಯಾಲಯ ದೂರವಾಣಿ ಸಂಖ್ಯೆ ೦೮೩೭೭-೨೪೪೨೨೭/೨೪೪೨೨೬ ಸಂಪರ್ಕಿಸಬಹುದಾಗಿದೆ.
Gadi Kannadiga > State > ಸಾರ್ವಜನಿಕರ ಗಮನಕ್ಕೆ
ಸಾರ್ವಜನಿಕರ ಗಮನಕ್ಕೆ
Suresh21/03/2023
posted on
More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023