ಗದಗ ಜನೆವರಿ ೩೧: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಹಾಗೂ ಅನರ್ಹವಾದ ಕಾರ್ಮಿಕರು ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡಲ್ಲಿ, ಫೆ.೨೫ ರೊಳಗೆ ಪಡೆದಿರುವ ಗುರುತಿನ ಚೀಟಿಯನ್ನು ಸ್ವ – ಇಚ್ಚೆಯಿಂದ ಆಯಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹಿಂತಿರುಗಿಸಿ ತಮ್ಮ ಸದಸ್ಯತ್ವವನ್ನು ರದ್ದು ಪಡಿಸಿಕೊಳ್ಳಬೇಕು.
ಇಲ್ಲವಾದಲ್ಲಿ ಇಲಾಖಾ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ನಕಲಿ ದಾಖಲೆ ಹಾಗೂ ಅನರ್ಹ ಕಾರ್ಮಿಕರು ಪಡೆದಿರುವ ಮಂಡಳಿಯ ಗುರುತಿನ ಚೀಟಿ ವಶಕ್ಕೆ ಪಡೆದುಕೊಳ್ಳುವರು ಹಾಗೂ ಮಂಡಳಿಯಿಂದ ಸೌಲಭ್ಯ ಪಡೆದುಕೊಂಡಲ್ಲಿ ಅಂತಹ ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಸಾರ್ವಜನಿಕರ ಗಮನಕ್ಕೆ
ಸಾರ್ವಜನಿಕರ ಗಮನಕ್ಕೆ
Suresh31/01/2023
posted on