This is the title of the web page
This is the title of the web page

Please assign a menu to the primary menu location under menu

State

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಗಮನಕ್ಕೆ


ಗದಗ ಜುಲೈ ೪: ೨೦೨೩-೨೪ ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಹೊಸದಾಗಿ ಶಾಲಾ/ಕಾಲೇಜು ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಪಡೆಯಲು ಸಾಕಷ್ಟು ಕಾಲಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜೂನ್ ೩೦ ರವರೆಗೆ ಸಂಸ್ಥೆಯ ನಗರ/ಹೊರವಲಯ/ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.
೦೧ ರಿಂದ ೧೨ ನೇ (ಪಿ.ಯು.ಸಿ) ತರಗತಿಯವರೆಗಿನ ವಿದ್ಯಾರ್ಥಿಗಳು ೨೦೨೩-೨೪ನೇ ಸಾಲಿನ ಸಂಸ್ಥೆಯ ಬಸ್ ಪಾಸ್ ಪಡೆಯಲು ಸೇವಾಸಿಂಧು ಮುಖಾಂತರ ಸಲ್ಲಿಸಲಾದ ಅರ್ಜಿ ಸ್ವೀಕೃತಿ ಹಾಗೂ ಪೋಟೋ ಹೊಂದಿರುವ ಯಾವುದಾದರೂ ಅಧೀಕೃತ ಗುರುತಿನ ಚೀಟಿಯನ್ನು ತೋರಿಸಿ ನಿಗದಿತ ಮಾರ್ಗದ ನಿರ್ಧಿಷ್ಟ ಸೇವೆಯಲ್ಲಿ ಜುಲೈ ೧೦ ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಿರುವ ಪೋಟೋ ಹೊಂದಿರುವ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಿ ಶಕ್ತಿಯೋಜನೆಯಡಿ ಶೂನ್ಯ ಟಿಕೇಟ್ ಪಡೆದು ಪ್ರಯಾಣಿಸಲು ಅನುಮತಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply