ಅರಣ್ಯ ಇಲಾಖೆ ದಾಳಿ ಮೂರು ಕೆಜಿ ಕಾಡು ಕುರಿ ಮಾಂಸ ಸಜೀವ ಗನ್ ವಶ

Prasanna Kumbar
WhatsApp Group Join Now

ಖಾನಾಪುರ

ಖಾನಾಪುರ: ತಾಲೂಕಿನ ಕರಂಬಳ ಗ್ರಾಮ ಪಂಚಾಯತಿಯ ಕೌಂದಲ ಗ್ರಾಮದ ಸುಶಾಂತ ಪಾಟೀಲ್ ಎನ್ನುವವರ ಮನೆಯಲ್ಲಿ ಸಂಗ್ರಹಿಸಿದ್ದ ಬೇಯಿಸಿಟ್ಟದ್ದ ಮತ್ತು ಹಸಿ 3.04 ಕೆಜಿ ಕಾಡು ಕುರಿ ಮಾಂಸ ಒಂದು ಗನ್ ಸೇರಿದಂತೆ ಚಾಕು ಕೊಡಲಿಗಳನ್ನ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಖಾನಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ ನಿರ್ದೇಶನದಂತೆ ಖಾನಾಪುರ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ್ ನೇತೃತ್ವದ ತಂಡ  ಕೌಂದಲ ಗ್ರಾಮದ ಆರೋಪಿ ಮನೆಗೆ ದಾಳಿ ಮಾಡಿ ಬೇಯಿಸಿದ್ದ ಮಾಂಸದ ಜೊತೆಗೆ ದಾಳಿ ಮಾಡಲು ಬಳಸಿದ ಬಂದೂಕು ಮತ್ತು ಕೊಡಲಿ,ಚಾಕುವನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡ ವಸ್ತುಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕಾರ್ಯಾಚರಣೆಯಲ್ಲಿ ಡಿಆರ್ಎಫ್ಓ ದೇವಮಾಣೆ,ಪ್ರಭಾರಿ ಸೇಂಥಿಲ್ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article
error: Content is protected !!