This is the title of the web page
This is the title of the web page

Please assign a menu to the primary menu location under menu

State

ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೂತನ ಸಮಿತಿ ರಚನೆ


ಬೆಳಗಾವಿ  ೭- ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿಯವರು ೨೦೨೩-೨೬ ನೇ ಸಾಲಿನ ನೂತನ ಜಿಲ್ಲಾ ಸಮಿತಿಯ ಪದಾದಿಕಾರಿಗಳನ್ನು ನೇಮಿಸಿದ್ದು ಇದೇ ತಿಂಗಳಿನಿಂದ ಈ ಸಮಿತಿ ಅಸ್ತಿತ್ವಕ್ಕೆ ಬರಲಿದೆ.
ನೂತನ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿ ಡಾ. ಸಿ. ಕೆ. ಜೋರಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಗಾರ್ಗಿ, ಉಪಾಧ್ಯಕ್ಷರುಗಳಾಗಿ ಆನಂದ ಪುರಾಣಿಕ, ಗುಂಡೇನಟ್ಟಿ ಮಧುಕರ, ರಾಜನಂದಾ ಗಾರ್ಗಿ, ಇಂದಿರಾ ಮೊಟೆಬೆನ್ನೂರ , ರಾಜೇಶ್ವರಿ ಹೆಗಡೆ, ಖಜಾಂಚಿಯಾಗಿ ಅನ್ನಪೂರ್ಣಾ ಹಿರೇಮಠ, ಕಾರ್ಯಕಾರಿ ಸದಸ್ಯರಾಗಿ ಎಂ. ಎ. ಪಾಟೀಲ, ಸುನಂದಾ ಮುಳೆ, ಭಾರತಿ ಮಠದ, ಮಮತಾ ಶಂಕರ, ಶೋಭಾ ಬನಶಂಕರಿ, ರಾಜೇಶ್ವರಿ ಹಿರೇಮಠ ಇವರು ಕಾರ್ಯ ನಿರ್ವಹಿಸಲಿದ್ದಾರೆ.
ರಜತಮಹೋತ್ಸವ ವರ್ಷದಲ್ಲಿರುವ ಜಿಲ್ಲಾ ಚುಸಾಪ ಗೌರವ ಸಲಹಾ ಮಂಡಳಿಯಲ್ಲಿ ಹಿರಿಯ ಕವಿ ಶ್ರೀ ಜಿನದತ್ತ ದೇಸಾಯಿ, ಪಿ. ಬಿ. ಸ್ವಾಮಿ, ಬಿ. ಎಸ್. ಗವಿಮಠ, ಡಾ. ಬಸವರಾಜ ಜಗಜಂಪಿ, ಡಾ. ಎಚ್. ಐ . ತಿಮ್ಮಾಪುರ, ಪ್ರೊ. ಎಂ.ಎಸ್. ಇಂಚಲ, ಶ್ರೀಮತಿ ನೀಲಗಂಗಾ ಚರಂತಿಮಠ ಮತ್ತು ಡಾ. ಪಿ. ಜಿ. ಕೆಂಪಣ್ಣವರ ಇವರು ಮಾರ್ಗದರ್ಶನ ಮಾಡಲಿದ್ದು , ನಿರ್ದೇಶಕ ಮಂಡಳಿ ಸದಸ್ಯರಾಗಿ ಸರ್ವ ಶ್ರೀ ಎ. ಎ. ಸನದಿ, ಆರ್. ಬಿ. ಕಟ್ಟಿ, ಅಶೋಕ ಮಳಗಲಿ, ದೀಪಿಕಾ ಚಾಟೆ, , ಚಂದ್ರಶೇಖರ ನವಲಗುಂದ, ಮುರುಗೇಶ ಶಿವಪೂಜಿ ಇವರು ಕಾರ್ಯ ನಿರ್ವಹಿಸಲಿದ್ದಾರೆ. ಇದೇ ದಿ. ೨೭ ರಂದು ಹೊಸ ಸಮಿತಿಯ ಕಾರ್ಯಾರಂಭ ಸಮಾರಂಭ ನಡೆಯಲಿದೆ. .


Leave a Reply