ತಾವರಗೇರಾ. ಸೆ.೧೨; ಸರಕಾರಿ ಪ್ರೌಢಶಾಲೆ ಕಿಲಾರಹಟ್ಟಿ ತಾ: ಕುಷ್ಟಗಿ ಜಿ: ಕೊಪ್ಪಳ ಸರಕಾರಿ ಪ್ರೌಢಶಾಲೆಯ 2023-24ನೇ ಸಾಲಿನ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯನ್ನು ಮಾಡಲಾಯಿತು. ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು ಸೇರಿಕೊಂಡು ೯ ಜನ ನೂತನ ಸದಸ್ಯರನ್ನು ಆಯ್ಕೆ ಮಾಡಿದರು. ಅವರಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಗಂಗಮ್ಮ ಮಾರುತಿ ವಾಲ್ಮಿಕಿಯವರನ್ನು ಆಯ್ಕೆ ಮಾಡಲಾಯಿತು. ಶ್ರೀ ವಿಜಯ ಹೀರಪ್ಪ ಚವ್ಹಾಣ, ಶ್ರೀ ಶಾಮಪ್ಪ ಸಣ್ಣಕೊಂಡಪ್ಪ ಕುಶೇಕಾಳ, ಶ್ರೀ ಮುಕ್ಕಣ್ಣ ಬಸಪ್ಪ ಜಗಲಿ, ಶ್ರೀಮತಿ ಶಾಂತಮ್ಮ ಬಸವರಾಜ ಬೋಗಾಪುರ, ಶ್ರೀ ಬಸನಗೌಡ ಹನುಮಗೌಡ ಪೋಲಿಸ್ ಪಾಟೀಲ್, ಶ್ರೀ ಛತ್ರಪ್ಪ ಗ್ಯಾನಪ್ಪ ತಳವಾರ, ಶ್ರೀಮತಿ ಹನುಮಮ್ಮ ನರಿಯಪ್ಪ ಸೂಜಿ, ಶ್ರೀ ಮದರಬೀ ಶಾಮೀದಸಾಬ ಇವರುಗಳು ಸದಸ್ಯರಾಗಿ ಆಯ್ಕೆಯಾದರು. ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯನ್ನು ಮಾಡಿಕೊಡಲು ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ನೋಡಲ್ ಅಧಿಕಾರಿಯಾಗಿ ತಾವರಗೇರಾ ವಲಯದ ಇ.ಸಿ.ಓ. ಶ್ರೀ ರಾಘಪ್ಪ ಶ್ರೀರಾಮರವರು ಆಗಮಿಸಿದ್ದರು. ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳು ಹಾಗೂ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಶ್ರೀ ಕೊಳದಪ್ಪ ತಳವಾರ, ಶ್ರೀ ನಾಗಪ್ಪ ತಳವಾರ, ಶ್ರೀ ಮೋತಿಲಾಲ್ ರಾಠೋಡ, ಶ್ರೀಮತಿ ದ್ಯಾಮಮ್ಮ ಬಸವರಾಜ ಪೂಜಾರಿ ಇನ್ನಿತರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ