ಅಥಣಿ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ, ನೀರಾವರಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಿಂದ 135 ಕೋಟಿ ರೂಪಾಯಿ ಮಂಜೂರಾತಿ ಆಗಿದ್ದು ಈ ಅನುದಾನದಲ್ಲಿ ಗ್ರಾಮಿಣ ಪ್ರದೇಶದಲ್ಲಿ ಸಂಪರ್ಕ ರಸ್ತೆ ಹೊಂದಿಕೂಡು ರಸ್ತೆ ಮತ್ತು ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ನದಿ ಇಂಗಳಗಾವ ದಿಂದ ಅರವಟಗಿ ವರೆಗಿನ ರಸ್ತೆ ಸುಮಾರು 150 ಲಕ್ಷ, ಕರಲಟ್ಟಿ ಇಂದ ಹಳೆ ಸಾವಳಗಿ ರಸ್ತೆ ಸುಮಾರು. ಅಥಣಿಯಿಂದ ಹಳೆತಂಗಡಿ ರಸ್ತೆ ಸುಮಾರು 1ಕೋಟಿ, ಹೊಸಟ್ಟಿ ಇಂದ ಮದಬಾವಿ ವರೆಗಿನ ರಸ್ತೆ ಸುಮಾರು 80 ಲಕ್ಷ, ಅಡಳಟ್ಟಿ ತಾವಂಶಿ ರಸ್ತೆ ಸುಮಾರು 120 ಲಕ್ಷ, ಯಲಹಡಗಿ ಬೊರಾಡಿ ರಸ್ತೆ ಸುಮಾರು 2 ಕೋಟಿ, ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು 2023 ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ರಾಜ್ಯ ಅಧ್ಯಕ್ಚ ನಳೀನ್ ಕುಮಾರ ಕಟೀಲ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಮೂರು ತಂಡಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನ ಸಂಘಟಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಗುತ್ತಿಗೆದಾರರಾದ ಶಿವರುದ್ರಪ್ಪ ಗುಳಪ್ಪನ್ನವರ, ನರಸಿಂಹ ಜ್ಯೋಶಿ, ಮುರಗೇಶ ಪಾಟೀಲ, ಮಹಾಂತೇಶ ಗುಳಪ್ಪನ್ನವರ, ಗುರುಬಸು ತೇವರಮನಿ,ಕುಮಾರ ಮಠಪತಿ,ಸತೀಶ ಗುಂಡಕಲ್ಲಿ,ನಾಗಪ್ಪ ಗುಳಪ್ಪನವರ,ಮಲ್ಲಪ್ಪ ಠಕ್ಕಣ್ಣವರ,ಅಲಗೌಡ ಮುದಿಗೌಡರ, ಶಂಕರ ಠಕ್ಕಣ್ಣವರ, ಅಪ್ಪು ಮಧಬಾವಿ, ಮಹಾಂತೇಶ ಪಾಟೀಲ,ಹಣಮಂತ ಸತಿಗೌಡರ, ಇನ್ನೂ ಹಲವಾರು ಮುಖಂಡರು ಇದ್ದರು.