This is the title of the web page
This is the title of the web page

Please assign a menu to the primary menu location under menu

Local News

ಸರ್ಕಾರದ ಮಟ್ಟದಲ್ಲಿ ಸಮಗ್ರ ಕೃಷಿ ನೀತಿ ಜಾರಿಗೊಳಿಸಬೇಕು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ


ಅಥಣಿ ತಾಲೂಕಿನ ಹನಮಾಪೂರ ಗ್ರಾಮದಲ್ಲಿ ಜರಗುತ್ತಿರುವ ಸದ್ಗುರು ಶ್ರೀ ಸಿದ್ದರತ್ನ ಮದಗೊಂಡೆಶ್ವರ ಅಪ್ಪಾಜಿಯವರ 12 ನೆ ಪುಣ್ಯಾರಾಧನೆ ಕಾರ್ಯಕ್ರಮವು ಸತವಾಗಿ 5 ದಿನ ನಡೆಯಲಿರುವ ಕಾರ್ಯಕ್ರಮವು ಇಂದು ಮೂರನೆ ದಿನ ರೈತ ಸಮ್ಮೇಳನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪರಮ ಪೂಜ್ಯರುಗಳ ಆಶೀರ್ವಾದ್ ಪಡೆದು ಅನ್ನ ಪ್ರಸಾದವನ್ನು ಸ್ವೀಕರಿಸಿದರು.

ಕಾರ್ಯಕ್ರಮ ವನ್ನೂ ಉದ್ಧೇಶಿಸಿ ಮಾತನಾಡಿದ ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಅವರು ಸಾವಯವ ಕೃಷಿಗೆ ಸರಿಯಾದ ಬೆಲೆ ದೊರಕಬೇಕಾದರೆ ಡಾ. ಎಂ. ಎಸ್.ಸ್ವಾಮಿನಾಥನ ಅವರು ಇಡಿ ಜಗತ್ತಿನಲ್ಲಿ ಪ್ರವಾಸ ಕೈಗೊಂಡು ಬೇರೆ ಬೇರೆ ದೇಶಗಳಲ್ಲಿ ಯಾವ ರೀತಿ ಕೃಷಿಯನ್ನ ನಿರ್ವಹಣೆ ಮಾಡುತ್ತಾರೆ ಎಂಬುದನ್ನ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು ಆದರೆ ಅದು ಇಲ್ಲಿಯವರೆಗೆ ಸಮಗ್ರವಾಗಿದ ಜಾರಿಯಾಗಿರುವದಿಲ್ಲ.. ಸರ್ಕಾರದ ಮಟ್ಟದಲ್ಲಿ ಸಮಗ್ರ ಕೃಷಿ ನೀತಿ ಜಾರಿ ಗೊಳಿಸಬೇಕು ಯಾವ ರೀತಿ ಸರ್ಕಾರ ರೇಲ್ವೆ ಬಜೆಟನ್ನು ಪ್ರತೀಕವಾಗಿ ಮಂಡನೆ ಮಾಡುತ್ತದೆ ಹಾಗೆ ರೈತರಿಗಾಗಿ ಪ್ರತೆಕ ಬಜೆಟ ಮಂಡನೆ ಮಾಡುವಂತಾಗಬೇಕು ರೈತರು ಬೆಳೆಯುವ ಪ್ರತಿಯೊಂದೂ ಬೆಳೆಯ ಬೇರೆ ಬೇರೆ ತರಹ ಬಜೆಟ್ ಮಂಡನೆ ಆಗಬೇಕು ಹಾಗೂ ಸರ್ಕಾರವೇ ಸ್ವತಃ ರೈತರ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನಿಗದಿ ಪಡಿಸಬೇಕು ಎಂದರು.

ನಮ್ಮ ದೇಶ ದೊಡ್ಡ ದೇಶವಾಗಿದ್ದು ಇಲ್ಲಿ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೂ ರೈತರಿಗೆ ಯಾವ ಕಾಲದಲ್ಲಿ ಯಾವ ಬೆಳೆ ಮಾಡಿದರೆ ಸೂಕ್ತ ಎಂಬುದನ್ನ ಗೊತ್ತು ಇಲ್ಲದೆ ಇದ್ದ ಕಾರಣ ಎಲ್ಲರು ಒಂದೆ ಬೆಳೆಯನ್ನು ಒಂದೆ ಸಮಯದಲ್ಲಿ ಬೆಳೆಯುವುದರಿಂದ ಸೂಕ್ತ ಬೆಲೆ ಸಿಗದೆಇದ್ದ ಕಾರಣ ರೈತನು ಕಂಗಾಲಾಗುವಂತಾಗುತ್ತದೆ. ಸರ್ಕಾರವು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕ್ರಮ ಕೈಗೊಳ್ಳ ಬೇಕು ಎಂದರೂ.

ನಂತರ ಮಾತನಾಡಿದ ಕೃಷ್ಣ ಶುಗರ್ಸ್ ಕಾರ್ಖಾನೆ ಅಧ್ಯಕ್ಷರಾದ ಪರಪ್ಪ ಸವದಿ ಅವರು ಪ.  ಅಮರೇಶ್ವರ ಪೂಜ್ಯರು ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ ಇಂತಹ ಮಹಾತ್ಮರು ನಮಗೆ ಸಿಗಬೇಕು ಎಂದರೆ ನಾವು ಪುಣ್ಯ ಮಾಡಿರಬೇಕು ಪರಮಪೂಜ್ಯರು ಏನೇ ಮಾಡಿದರು ತನಗಲ್ಲದೆ ಪರರಿಗೆ ಮಾತ್ರ ಅವರು ಮಾಡುವ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲ ಬೇಕಾದದ್ದು ನಮ್ಮ ಕರ್ತವ್ಯ ಇಂತಹ ಮಹಾನುಭಾವರಿಗೆ ಯಾವುದೇ ತರಹದ ಆಸೆ ಆಕಾಂಕ್ಷೆಗಳು ಇರುವುದಿಲ್ಲ ಇವರಿಗೆ ಮಕ್ಕಳು ಅನ್ನೋಹಾಗೆ ಯಾರೂ ಇರುವುದಿಲ್ಲ ಇವರಿಗೆ ಸರ್ವ ಜನಾಂಗವೇ ಮಕ್ಕಳು ನಿವೆ ಇವರಿಗೆ ಆಸ್ತಿ ಬಾಗೆ ಮಾತು ಮುಂದುವರೆಸಿದ ಅವರು ಮಾಜಿ ಶಾಸಕ ಡೊಂಗರಗಾಂವ್ ಅವರು ಕೃಷಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟಿದ್ದು ಸಂತೋಷದ ವಿಷಯ ಏಕೆಂದರೆ ಇವರು ಶಾಸಕರು ಆಗುವ ಮೊದಲು ಪೋಸ್ಟ್ ಮಾಸ್ಟರ್ ಆಗಿದ್ದರು ಕೃಷಿಯಲ್ಲಿ ರುಚಿ ಹೊಂದಿದವರು ನಾವು ಹಾಗೂ ಡೊಂಗರಗಾಂವ ಅವರು ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಕೂಡ ನಾವೆಲ್ಲರೂ ಅಣ್ಣ-ತಮ್ಮಂದಿರು ಇದ್ದ ಹಾಗೆ ಇನ್ನು ಆದರೂ ಕೂಡ ಇವರ ಮನೆತನದಲ್ಲಿ ಕೃಷಿ ಪಂಡಿತರು ಇದ್ದಾರೆ ಎಂಬುದು ಚೆನ್ನಾಗಿ ಗೊತ್ತು ಎಂದರು.


Gadi Kannadiga

Leave a Reply