This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯ ೩೫ ಅಮರನಾಥ ಯಾತ್ರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸಿದ ಮಾಜಿ ಶಾಸಕ ಅನಿಲ ಬೆನಕೆ


ಬೆಳಗಾವಿ ೧೦ : ಉತ್ತರ ಭಾರತದಲ್ಲಿ ಉಂಟಾಗಿರುವ ಜಲಪ್ರವಾಹದಿಂದಾಗಿ ಬೆಳಗಾವಿಯ ೩೫ ಶಿವ ಭಕ್ತರು ಅಮರನಾಥ ಯಾತ್ರೆ ಮುಗಿಸಿ ವಾಪಸ್ಸಾಗುವ ವೇಳೆ ಶ್ರೀನಗರ ಮತ್ತು ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯು ಕುಸಿದು ಬಿದ್ದಿದ್ದರ ಪರಿಣಾಮ ಅನಂತನಾಗ ಬಳಿ ಸಿಲುಕಿದ್ದಾರೆ. ಅದೃಷ್ಠವಶಾತ ಅವರೆಲ್ಲರೂ ಸುರಕ್ಷಿತವಾಗಿದ್ದು, ೩ ದಿನಗಳ ಕಾಲ ಭಾರತೀಯ ಸೇನೆಯ ಬಿ.ಎಸ್.ಎಪ್ ಬೆಸ್ ಕ್ಯಾಂಪ ನಲ್ಲಿ ರಕ್ಷಣೆಯನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆರವರು ಯಾತ್ರಿಗಳಿಗೆ ದೂರವಾಣಿ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
ಅಮರನಾಥ ಯಾತ್ರಿಯ ಮಾರ್ಗದ ಸೇತುವೆ ಕುಸಿದು ಬಿದ್ದಿದ್ದು, ಅಪಾರ ಸ್ಥಳಗಳಲ್ಲಿ ಹಾನಿಯಾಗಿವುದಾಗಿ ತಿಳಿಸಿರುವ ಯಾತ್ರಿಗಳು ಬೆಳಗಾವಿ ೨೫ ಪುರುಷರು ಮತ್ತು ೧೦ ಮಹಿಳೆಯರು ಇರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆರವರು ಅಮರನಾಥ ಯಾತ್ರಿಗಳಿಗೆ ಖುದ್ದಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ ಹಾಗೂ ಆರ್ಥಿಕ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದು, ಯಾವುದೇ ತೊಂದರೆಗಳಿದ್ದರೆ ಸಂಪರ್ಕಿಸುವಂತೆ ಮತ್ತು ಸುರಕ್ಷಿತವಾಗಿ ಮರಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಮರನಾಥ ಯಾತ್ರಿಗಳು ಬಿ.ಎಸ್.ಎಪ್ ಸೈನಿಕರು ೩ ದಿನಗಳ ಕಾಲ ಉಟೋಪಚಾರ ಮಾಡಿ ಆಶ್ರಯ ನೀಡಿದ್ದು ನಾವು ಇಲ್ಲಿ ಸುರಕ್ಷತವಾಗಿರುವುದಾಗಿ ತಿಳಿಸಿದ್ದು, ಭಾರತೀಯ ಸೈನ್ಯಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಅದರಂತೆಯೇ ಮಾಜಿ ಶಾಸಕ ಅನಿಲ ಬೆನಕೆ ರವರು ದೂರವಾಣಿ ಕರೆ ಮಾಡಿ ನಮ್ಮ ಯೋಗಕ್ಷೇಮವನ್ನು ವಿಚಾರಿಸಿರುವುದು ಸಂತೋಷವಾಗಿದ್ದು, ಅವರಿಗೂ ಕೂಡಾ ಬೆಳಗಾವಿ ಅಮರನಾಥ ಯಾತ್ರಿಗಳು ಧನ್ಯವಾದಗಳನ್ನು ಅರ್ಪಿಸಿರುವ ಅವರು ಇಲ್ಲಿನ ಪ್ರಶಾಸನವು ಯಾವಾಗ ಮರಳುವಂತೆ ತಿಳಿಸುತ್ತಾರೆ ಅಂದು ನಾವು ಮರಳಿ ಬೆಳಗಾವಿಗೆ ಬರುವುದಾಗಿ ಯಾತ್ರಿಗಳಾದ ಸೋಮನಾಥ ಹಲಗೇಕರ, ಸಂತೋಷ ದಿವಟೆ, ರುತುರಾಜ ಬೀಡಿಕರ, ಪರಶುರಾಮ ಬರಡೆ, ನಿತೀನ ಆನಂದಾಚೆ, ವಿನಾಯಕ ಪಾಟೀಲ, ನಂದು ಗುರವ, ಆದೇಶ ಪಾಟೀಲ, ರೇಣುಕಾ ಬಿಡೀಕರ, ಶ್ವೇತಾ ಹಲಗೇಕರ, ಶ್ರದ್ದಾ ಬಡಮಂಜಿ ಹಾಗೂ ಇತರ ಯಾತ್ರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.


Leave a Reply