This is the title of the web page
This is the title of the web page

Please assign a menu to the primary menu location under menu

State

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಸುಬ್ಬರಾವ್ ನಿಧನ


ಗಂಗಾವತಿ :-ತಾಲೂಕಿನ ಸಣ್ಣಾಪುರ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಾಕರಲಾ ಸುಬ್ಬರಾವ್ ಗುರುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ 86 ವರ್ಷಗಳಾಗಿದ್ದುವು. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಹಿರಿಯ ಪತ್ರಕರ್ತ ಕೆ.ಮಲ್ಲಿಕಾರ್ಜುನ ಸಣ್ಣಾಪುರ
ಸೇರಿದಂತೆ ಇಬ್ಬರು ಪುತ್ರರು,ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಬಿಟ್ಟು ಅಗಲಿದ್ದಾರೆ.
1983 ರಲ್ಲಿ ಆನೆಗೊಂದಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಯಾಗಿದ್ದರು. ರೈತ ಮುಖಂಡರಾಗಿದ್ದ ಸುಬ್ಬರಾವ್ ಅವರು ನೀರಾವರಿ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ್ದರು.ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಅವರು ಸುಬ್ಬರಾವ್ ನಿವಾಸಕ್ಕೆ ತೆರಳಿ ನೀರಾವರಿ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದರು.
ಇವರ ಅಂತ್ಯ ಕ್ರೀಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಸಣ್ಣಾಪುರ ಗ್ರಾಮದಲ್ಲಿ ಜರುಗಲಿದೆ.

ಸಂತಾಪ: ಕಾಕರಲಾ ಸುಬ್ಬರಾವ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತ ಸಂಘ ಹಾಗೂ ಮೀಡಿಯಾ ಕ್ಲಬ್ ಸಂತಾಪ ವ್ಯಕ್ತಪಡಿಸಿದ್ದಾರೆ.

(ಹನುಮೇಶ ಬಟಾರಿ)


Gadi Kannadiga

Leave a Reply