This is the title of the web page
This is the title of the web page

Please assign a menu to the primary menu location under menu

Local News

ಎಸ್.ಕೆ.ಇ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ


ಬೆಳಗಾವಿ -೩: ನಗರದ ಪ್ರತಿಷ್ಠಿತ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯು ಬರುವ ಅಗಸ್ಟ – ೬ ರಂದು ನಗರದ ಆರ್.ಪಿ.ಡಿ. ಕಾಲೇಜಿನ ಕೆ.ಎಂ. ಗಿರಿ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಲಿದೆ. ದಿನಾಚರಣೆಗೆ ಮುಖ್ಯ ಅತಿಥಿಗಳಾಗಿ ಕೊಲ್ಲಾಪೂರ ಶಿವಾಜಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಿ. ಟಿ. ಶಿರ್ಕೆ ಅವರು ಆಗಮಿಸಲಿದ್ದು, ಗೌರವ ಅತಿಥಿಗಳಾಗಿ ರಾಜಮಾತಾ ರಾಣಿ ಪಾರ್ವತಿ ದೇವಿ ಅವರ ಮೊಮ್ಮಗ ಶ್ರೀ. ಖೇಮರಾಜ ಸಾವಂತ ಭೋಸಲೆ ಅವರು ಆಗಮಿಸಲಿದ್ದಾರೆ. ಸಂಸ್ಥೆಯ ಚೇರಮನ್ನರಾದ ಶ್ರೀ. ಕಿರಣ ಠಾಕೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಖ್ಯಾತ ಶಿಕ್ಷಣ ತಜ್ಞರು, ಸಂಖ್ಯಾಶಾಸ್ತ್ರಜ್ಞರೂ ಆದ ಪ್ರೊ. ಡಿ. ಟಿ. ಶಿರ್ಕೆ ಅವರು ಈ ಸಂಧರ್ಭದಲ್ಲಿ ಸಂಸ್ಥೆಯ ಸಾಧನೆಯ ಮತ್ತು ಉನ್ನತ ಶಿಕ್ಷಣದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಬೆಳಗಾವಿಯ ನಾಗರಿಕರು, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಹಾಲೀ ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply