This is the title of the web page
This is the title of the web page

Please assign a menu to the primary menu location under menu

Local News

ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ಮತ್ತು ಸತ್ತಿಗೇರಿ ಏತ ನೀರಾವರಿ ಯೋಜನೆಗೆ ದಿವಂಗತ ಆನಂದ ಮಾಮನಿ ಹೆಸರು: ಸಿಎಂ ಬೊಮ್ಮಾಯಿ


ಸವದತ್ತಿ: ಸ್ಥಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಸತ್ತಿಗೇರಿ ಏತ ನೀರಾವರಿ, ಪಟ್ಟಣಕ್ಕೆ ರೇಣುಕಾ ಸಾಗರದಿಂದ ನೀರು ಸರಬರಾಜು, ಸಾರ್ವಜನಿಕ ಆಸ್ಪತ್ರೆಯಲ್ಲಿ ೬೦ ಹಾಸಿಗೆಯ ಕಟ್ಟಡ, ತರಕಾರಿ ಮಾರುಕಟ್ಟೆ ಮತ್ತು ಜಲ ಸಂಗ್ರಹಗಾರಕ್ಕೆ ಶಿಲಾನ್ಯಾಸ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆ ರೀತಿ ಕೆಲಸ ಮಾಡಿದ್ದೇನೆ. ಎಲ್ಲ ಜನಾಂಗಕ್ಕೆ ಒಳ ಮೀಸಲಾತಿ ಮತ್ತು ಪಂಚಮಸಾಲಿಗೆ ಶೇ.೨ ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ರಾಜ್ಯ ಆರ್ಥಿಕ ಸೇರಿ ಎಲ್ಲ ರಂಗದಲ್ಲಿ ಮುನ್ನುಗ್ಗುತ್ತಿದೆ ಎಂದರು. ವಿವಿಧ ಕಾಮಗಾರಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಸಿ.ಎಂ. ‘ಸತ್ತಿಗೇರಿ ಏತ ನೀರಾವರಿ ಯೋಜನೆಗೆ ದಿವಂಗತ ಆನಂದ ಮಾಮನಿ ಅವರ ಹೆಸರಿಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಸತ್ತಿಗೇರಿ ಏತ ನೀರಾವರಿ ಯೋಜನೆಗೆ ?೩೦೦ ಕೋಟಿ ಮೀಸಲು, ೧೬೦೦ ಎಕರೆ ಭೂಮಿಗೆ ನೀರುಣಿಸುವ ಕಾರ್ಯ ಒಂದೂವರೆ ವರ್ಷದಲ್ಲಿ ಜನೋಪಯೋಗಕ್ಕೆ ಬರಲಿದೆ’ ಎಂದರು.‘ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಇದನ್ನು ಪಕ್ಷ ಹಾಗೂ ವರಿಷ್ಠರು ಗಮನಿಸಿದ್ದು ಅವರೇ ಅದನ್ನು ನಿರ್ಣಯಿಸುತ್ತಾರೆ. ಅಭಿಮಾನಿಗಳಿಗೆ ನಿರಾಶೆಯಾಗದಂತೆ ಸ್ಪಂದಿಸಲಾಗುವುದು. ಮುಂದಿನ ಅವಧಿಗೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಎಲ್ಲರೂ ಸಹಕರಿಸಬೇಕು’ ಎಂದರು. ನಂತರ ನವಿಲುತೀರ್ಥ ಅಣೆಕಟ್ಟಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸ್.ಜಿ. ಬಾಳೇಕುಂದ್ರ ಅವರ ಪ್ರತಿಮೆ ಅನಾವರಣಗೊಳಿಸಿದರು. ವಿವಿಧ ಸಮುದಾಯಗಳ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.
ಈ ವೇಳೆ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಂಜೀವಕುಮಾರ ನವಲಗುಂದ, ವಿರೂಪಾಕ್ಷ ಮಾಮನಿ, ಅಜೀತಕುಮಾರ ದೇಸಾಯಿ, ವಿನಯಕುಮಾರ ದೇಸಾಯಿ, ಬಸವರಾಜ ಪಟ್ಟಣಶೆಟ್ಟಿ, ರುದ್ರಣ್ಣಾ ಚಂದರಗಿ ಹಾಗೂ ಪ್ರಮುಖರು ಇದ್ದರು. ಮಾಮನಿ ಪರ ಘೋಷಣೆ ಸಮಾರಂಭದಲ್ಲಿ ಸೇರಿದ ಹಲವು ಬಿಜೆಪಿ ಕಾರ್ಯಕರ್ತರು ದಿವಂಗತ ಆನಂದ ಮಾಮನಿ ಅವರ ಭಾವಚಿತ್ರ ಪ್ರದರ್ಶಿಸಿ, ಅವರ ಪರ ಘೋಷಣೆ ಕೂಗಿದರು. ಈ ಬಾರಿ ಬಿಜೆಪಿ ಟಿಕೆಟ್ ಅನ್ನು ಮಾಮನಿ ಅವರ ಕುಟುಂಬಕ್ಕೇ ನೀಡಬೇಕು ಎಂದು ಘೋಷಣೆ ಹಾಕಿದರು.
ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ತಾಯಿಮಕ್ಕಳ ಆಸ್ಪತ್ರೆಯನ್ನು ಮುಖ್ಯಮಂತ್ರಿ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಆಯೋಜಿದ್ದ ನವಗ್ರಹ ಪೂಜೆಯಲ್ಲಿ ಪಾಲಗೊಂಡ ಬಿಜೆಪಿ ಯುವ ಮುಖಂಡ ಸಂಜೀವಕುಮಾರ ನವಲಗುಂದ ಹಾಗೂ ರತ್ನಾ ಮಾಮನಿ, ಜಿಲ್ಲಾ ವೈಧ್ಯಾಧಿಕಾರಿ ಮಹೇಶ ಕೋನಿ, ತಾಲೂಕಾ ವೈಧ್ಯಾಧಿಕಾರಿ ಮಹೇಶ ಚಿತ್ತರಗಿ, ಮುಖ್ಯವೈಧ್ಯಾಧಿಕಾರಿ ಎಚ್. ಎಮ್. ಮಲ್ಲನಗೌಡ ಪಾಟೀಲ, ಡಾ. ಸ್ವರೂಪಾ ಬಿರಾದಾರ, ಡಾ. ವೀಣಾ ಇಟ್ನಾಳಮಠ, ಡಾ. ಕವಿತಾ ಎಚ್. ವಿ, ಡಾ|| ವಿದ್ಯಾ ಸೇಬನ್ನವರ ಇದ್ದರು.


Leave a Reply