This is the title of the web page
This is the title of the web page

Please assign a menu to the primary menu location under menu

Local News

ಬುದ್ಧಿಮಾಂದ್ಯ ಮಕ್ಕಳಿಗೆ ಆರೋಗ್ಯ ತಪಾಸಣೆ: ಏ.೭ ರಂದು ಉಚಿತ ಬಸ್ ವ್ಯವಸ್ಥೆ


ಬೆಳಗಾವಿ,ಏ.೦೬: ಸ್ಪೆಷಲ್ ಒಲಂಪಿಕ್ಸ್ ಭಾರತ್ ಆಯೋಜಿಸಿರುವ“ಆಜಾಧಿ ಕಾ ಅಮೃತ್ ಮಹೋತ್ಸವ” ಕಾರ್ಯಕ್ರಮ ಹಿನ್ನೆಲೆಯಲ್ಲಿ ಏಪ್ರಿಲ್ ೭ ರಂದು ಜಿಲ್ಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಹಮ್ಮಿಕೊಂಡಿರುವ ಆರೋಗ್ಯ ತಪಾಸಣೆಗೆ ತೆರಳುವ ಮಕ್ಕಳಿಗಾಗಿ ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ದೇಶಾದ್ಯಂತ ೭೫,೦೦೦ ಬುದ್ಧಿಮಾಂದ್ಯ ಮಕ್ಕಳಿಗೆ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು ಅದರಂತೆ ಜಿಲ್ಲೆಯ ಸರ್ಕಾರ ಹಾಗೂ ಸರ್ಕಾರೇತರ ವಿಶೇಷ ಶಾಲೆಯ ಸ್ಪೆಷಲ್ ಒಲಂಪಿಕ್ಸ್ ಭಾರತ-ಕರ್ನಾಟಕ ಅಮೃತ ಮಹೋತ್ಸವದ ಗುರುತಿನ ಚೀಟಿ ಹೊಂದಿರುವ ಬುದ್ದಿಮಾಂದ್ಯ ಮಕ್ಕಳು ಒಬ್ಬರು ಸಹಾಯಕರೊಂದಿಗೆ (ಪೋಷಕರು/ಶಿಕ್ಷಕರು/ಸ್ವಯಂಸೇವಕರು) ಒಂದು ದಿನದ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಆರೋಗ್ಯ ತಪಾಸಣೆಗಾಗಿ ನಿಯೋಜಿತ ಸ್ಥಳಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ಬುದ್ಧಿಮಾಂದ್ಯ ಮಕ್ಕಳು ಗುರುತಿನ ಚೀಟಿಯನ್ನು ತೋರಿಸಿ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಚಾಲನಾ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply