This is the title of the web page
This is the title of the web page

Please assign a menu to the primary menu location under menu

State

26ರಂದು ಮೂಳೆಗಳ ಬಲವರ್ಧನೆ ತಪಾಸಣೆ ಉಚಿತ ಶಿಬಿರ


ಗದಗ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಮುನ್ಸಿಪಲ್ ಕಾಲೇಜ್ ಹತ್ತಿರವಿರುವ ರಾಫಾ ಎಲುಬು ಕೀಲುಗಳ ಆಸ್ಪತ್ರೆಯಲ್ಲಿ ಮಾ. 26ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಉಚಿತವಾಗಿ ಮೂಳೆಗಳ ಬಲವರ್ಧನೆಯ ಮೌಲ್ಯಮಾಪನ ಪರೀಕ್ಷಿಸುವ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
50 ವರ್ಷ ಮೇಲ್ಪಟ್ಟ ಪುರುಷರು ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಮಧುಮೇಹ, ಸಂಧಿವಾತ ಹೀಗೆ ನಾನಾ ಕಾಯಿಲೆಗಳಿಗೆ ತುತ್ತಾಗಿ ಅನೇಕ ದಿನಗಳಿಂದ ಔಷಧಿ ಪಡೆಯುತ್ತಿರುವವರು, ಅತಿಯಾಗಿ ಧೂಮಪಾನ- ಮಧ್ಯಪಾನ ಮಾಡುವವರು ಮತ್ತು ಅನುವಂಶಿಕವಾಗಿ ಕಂಡು ಬರುವ ರೋಗಗಳು, ಚಪ್ಪೆ ಮುರಿತ ಸಮಸ್ಯೆ ಇರುವವರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.
ಗರಿಷ್ಠ 200  ಜನರಿಗೆ ಯಾವುದೇ ಅಡ್ಡಪರಿಣಾಗಳಿಲ್ಲದ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣದ ಮೂಲಕ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಮಾ. 25ರ ಸಂಜೆ ಒಳಗಾಗಿ ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ರಾಫಾ ಆಸ್ಪತ್ರೆ ದೂ. 9483214777 ಕರೆ ಮಾಡಬಹುದು ಎಂದು ಡಾ. ರೋನಾಲ್ಡ್ ಖಾನಾಪುರ ತಿಳಿಸಿದ್ದಾರೆ.


Leave a Reply