ಬೆಳಗಾವಿ, ಸೆ.೧೨ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಂದಾದೀಪ ನೇತ್ರಾಲಯ ಸಹಯೋಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಉಚಿತ ನೇತ್ರ ತಪಾಸಣೆ ಮಾಡಲಾಯಿತು.ನಗರದ ವಾರ್ತಾಭವನದಲ್ಲಿ ಮಂಗಳವಾರ(ಸೆ.೧೨) ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು, ಮಾಧ್ಯಮ ಪ್ರತಿನಿಧಿಗಳು ವೃತ್ತಿಯ ಕಾರಣಕ್ಕಾಗಿ ಸದಾ ಕಂಪ್ಯೂಟರ್ ಹಾಗೂ ಮೊಬೈಲ್ ಗಳನ್ನು ಬಳಕೆ ಮಾಡುವುದರಿಂದ ಕಣ್ಣಿನ ತೊಂದರೆಗಳು ಕಂಡುಬರುವುದು ಸಹಜ. ಆದ್ದರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ವೃತ್ತಿಯ ಒತ್ತಡದಿಂದಾಗಿ ಅನೇಕ ಜನರಿಗೆ ನಿಯಮಿತ ತಪಾಸಣೆ ಸಾಧ್ಯವಾಗಿರುವುದಿಲ್ಲ. ಅಂತವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ನಂದಾದೀಪ ನೇತ್ರಾಲಯ ಸಹಯೋಗದಿಂದ ಉಚಿತ ತಪಾಸಣೆ ಕೈಗೊಂಡು ರಿಯಾಯಿತಿ ದರದಲ್ಲಿ ಹೆಚ್ಚಿನ ಚಿಕಿತ್ಸೆ ಹಾಗೂ ಕನ್ನಡಕಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ನಂದಾದೀಪ ನೇತ್ರಾಲಯದ ಕಾರ್ಯನಿರ್ವಾಹಕ ಆನಂದ ತುಪ್ಪದ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ನಂದಾದೀಪ ನೇತ್ರಾಲಯವು ರಿಯಾಯಿತಿ ದರದಲ್ಲಿ ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಿದೆ ಎಂದು ವಿವರಿಸಿದರು.
ಮಾಧ್ಯಮ ಪ್ರತಿನಿಧಿಗಳಾದ ರಾಜು ಗವಳಿ, ರವೀಂದ್ರ ಉಪ್ಪಾರ, ಎಚ್.ವಿ.ನಾಗರಾಜ್, ಸುಭಾನಿ ಮುಲ್ಲಾ, ಪಿ.ಕೆ.ಬಡಿಗೇರ, ಶ್ರೀಕಾಂತ ಕುಬಕಡ್ಡಿ, ಅಣ್ಣಪ್ಪ ಬಾರ್ಕಿ, ಪಾರೀಷ್ ಭೋಸಲೆ, ಇಮಾಮ್ ಹುಸೇನ್ ಗೂಡುನವರ, ಜಗದೀಶ್ ವಿರಕ್ತಮಠ, ಸುನಿಲ್ ಪಾಟೀಲ, ಸಂಪತ್ ಕುಮಾರ ಮುಚಳಂಬಿ, ರಾಜು ನದಾಫ್, ಕುಂತಿನಾಥ ಕಲಮನಿ, ಹಿರಿಯ ನೇತ್ರಶಾಸ್ತö್ರಜ್ಞರಾದ ಪದ್ಮಾವತಿ ಕೆ, ತಿಲಕ್ ಎನ್, ಮದಾಬ್ ಎಮ್, ಸಾಗರ ಗಬ್ಬರ್, ದೀಪಕ ಡಿ, ಪರಿಮಳಾ, ರವಿ ಎಮ್ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿ ಸೇರಿದಂತೆ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Gadi Kannadiga > Local News > ಮಾಧ್ಯಮ ಪ್ರತಿನಿಧಿಗಳಿಗೆ ಉಚಿತ ನೇತ್ರ ತಪಾಸಣೆ ನಿಯಮಿತವಾಗಿ ನೇತ್ರ ತಪಾಸಣೆ ಅಗತ್ಯ: ಗುರುನಾಥ ಕಡಬೂರ
ಮಾಧ್ಯಮ ಪ್ರತಿನಿಧಿಗಳಿಗೆ ಉಚಿತ ನೇತ್ರ ತಪಾಸಣೆ ನಿಯಮಿತವಾಗಿ ನೇತ್ರ ತಪಾಸಣೆ ಅಗತ್ಯ: ಗುರುನಾಥ ಕಡಬೂರ
Suresh12/09/2023
posted on
