ಸವದತ್ತಿ: ೧೨: ಪ್ರತಿವರ್ಷದಂತೆ ಈ ವರ್ಷವೂ ಸಹ ಉಚಿತ ಶಸ್ತ್ರ ನೇತ್ರ ಶಸ್ತ್ರ ಚೀಕಿತ್ಸಾ ಶಿಬಿರವನ್ನು ಸಿ ಎಮ್ ಮಾಮನಿ ಚಾರಿಟೆಬಲ್ ಟ್ರಸ್ಟ ಸವದತ್ತಿ. ಜನಹಿತ ಐಕೇರ ಸೆಂಟರ ಬೆಂಗಳೂರ, ಹಿಂದೂಪುರ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ. ಜಿಲ್ಲಾ ಆರೋಗ್ಯ ಮತ್ತು ಕುಟುಂ¨ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಳಗಾವಿ, ಸಾರ್ವಜನಿಕ ಆಸ್ಪತ್ರೇ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ ಉಪ ಸಭಾದ್ಯಕ್ಷ ದಿವಂಗತ ಚಂದ್ರಶೇಖರ ಮ ಮಾಮನಿಯವರ ೨೪ನೇಯ ಪುಣ್ಯತಿಥಿ, ಇವರ ಪುತ್ರ ದಿವಂಗತ ಆನಂದ ಚ ಮಾಮನಿಯವರ ೫೬ನೇಯ ಹುಟ್ಟು ಹಬ್ಬ ನೀಮಿತ್ಯವಾಗಿ ಉಚಿತ ನೇತ್ರ ಶಸ್ತ್ರ ಚೀಕಿತ್ಸಾ ಶಿಬಿರವನ್ನು ದಿ ೧೬/೧/೨೦೨೩ ಸೋಮವಾರ ರಿಂದ ೧೮/೧/೨೦೨೩ ವರೆಗೆ ಸ್ಥಳೀಯ ಸರಕಾರಿ ಸಾರ್ವಜನಿಕ ಆಸ್ಪತ್ರೇಯಲ್ಲಿ ಎರ್ಪಡಿಸಲಾಗಿದೆ
ಈ ಶಿಬೀರದಲ್ಲಿ ಡಾಕ್ಟರ ಕೃಷ್ಣ ಮೋಹನ ಜಿಂಕಾ ಮತ್ತು ತಂಡ. ಡಾ ಎಸ್ ಬಿ ಹಿತ್ತಲಮನಿ, ಡಾ. ಸಲಿಮ್ ಕಿತ್ತುರ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ ಮಹೇಶ ಕೋಣಿ. ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ದರ್ಶನ್ ಎಚ್ ವಿ, ತಹಶೀಲ್ದಾರ ಬಿ ಜಿ ಜಕ್ಕನಗೌಡರ, ಡಾ ಚಾಂದನಿ, ತಾ ಪಂ ಇಓ, ಯಶ್ವಂತಕುಮಾರ, ಮುಖ್ಯ ವೈದ್ಯಾಧಿಕಾರಿ ಎಚ್ ಎಮ್ ಮಲ್ಲನಗೌಡರ, ತಾಲೂಕಾ ವೈದ್ಯಾಧಿಕಾರಿ ಡಾ ಮಹೇಶ ಚೀತ್ತರಗಿ, ಗಂಗಮ್ಮ ಚ ಮಾಮನಿಯವರು ಉಪಸ್ಥಿತರಿರುವರು ಎಂದು ಬಾರತೀಯ ಜನತಾ ಪಕ್ಷದ ಮುಖಂಡರಾದ ರತ್ನಕ್ಕ ಮಾಮನಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ