This is the title of the web page
This is the title of the web page

Please assign a menu to the primary menu location under menu

Local News

ಬೇನಕೆ ಪೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರ


ಬೆಳಗಾವಿ: ವಿಶ್ವವೈದ್ಯರ ದಿನಾಚರಣೆ ಅಂಗವಾಗಿ ಇಂದು ನಗರದ ಚವಾಟ ಗಲ್ಲಿಯ ಮಾರುತಿ ಮಂಗಳ ಕಾರ್ಯಾಲಯದಲ್ಲಿ ಬೇನಕೆ ಪೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು..

ಈ ವೇಳೆ ಶಿಬಿರದಲ್ಲಿ ಭಾಗಿಯಾದ ಎಲ್ಲ ವೈದ್ಯರಿಗೆ ಗುಲಾಬಿ ಹೂ ಕೊಡುವುದರ ಮೂಲಕ ವೈದ್ಯ ದಿನದ ಶುಭಾಶಯ ಕೋರಿದ ಶಾಸಕರು ಡಾ ಪ್ರಭಾಕರ ಕೋರೆ ಸಹಕಾರದೊಂದಿಗೆ ನಮ್ಮ ಫೌಂಡೇಶನ್ ವತಿಯಿಂದ ಎಲ್ಲ ಜನರಿಗೆ ಉಚಿತ ಆರೋಗ್ಯ ಸಿಗಲೆಂದು ಈ ಶಿಬಿರ ಆಯೋಜಿಸಿದ್ದೆವೆ, ಇದರ ಸದುಪಯೋಗ ಎಲ್ಲರೂ ಪಡೆಯಬೇಕು ಎಂದರು.

ಪ್ರತಿವಾರ ಇಂತಾ ಆರೋಗ್ಯ ಶಿಬಿರ ನಾವು ನಡೆಸುತ್ತಿದ್ದು ಜನರು ಇಂತಾ ಮಳೆಗಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಶಿಬಿರದಲ್ಲಿ 30 ರಿಂದ 60 ವರ್ಷದ ವಯಸ್ಕರರು ತಪಾಸಣೆ ಮಾಡಿಕೊಂಡರು, ಕೆಎಲ್ಇ ಸಂಸ್ಥೆಯ ಹೃದಯ ತಜ್ಞರು, ದಂತ ಚಿಕಿಸ್ತಕರು, ಆಯುರ್ವೇದ ವೈದ್ಯರು ತಪಾಸಣಾ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು.


Gadi Kannadiga

Leave a Reply