ಬೆಳಗಾವಿ: ಸರಿಯಾದ ಸಾರಿಗೆಯ ವ್ಯವಸ್ಥೆಯನ್ನೇ ಕಾಣದ ಖಾನಾಪೂರ ತಾಲೂಕಿನ ಚೋರ್ಲಾ ಕುಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಲೋಕಕಲ್ಪ ಫೌಂಡೇಷನ್ ನ ಸಹಯೋಗದಲ್ಲಿ ಸೋಮವಾರ ೧೦/೦೪/೨೦೨೩ ರಂದು ಬೆಳಿಗ್ಗೆ ೧೦ ಇಂದ ಮದ್ಯಾಹ್ನ ೨ ರವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಮೃತ ಅವರು ಚೋರ್ಲಾ ಗ್ರಾಮz ೮೦ಕ್ಕೂ ಅಧಿಕÀ ಗ್ರಾಮಸ್ಥರನ್ನು ಉಚಿತವಾಗಿ ತಪಾಶಿಸಿ ಔಷಧಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ ಮತ್ತು ವೈದ್ಯಕೀಯ ಸಿಬ್ಬಂದಿಗಳು ಮತ್ತು ಲೋಕಕಲ್ಪ ಫೌಂಡೇಷನ್ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಜೆನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಬಿ ಅವರು ಶಿಬಿರಾರ್ಥಿಗಳನ್ನು ಅಭಿನಂದಿಸಿದರು. ಶಿಬಿರಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತ “ಎಲೆಮರೆಯ ಕಾಯಿಯಂತಿರುವ ಖಾನಾಪೂರ ತಾಲೂಕಿನ ಕುಗ್ರಾಮಗಳಾದ, ಕಾಪೋಲಿ, ಚಾಪೋಲಿ, ಪರವಾಡ, ವಾಡೆ ಸಾಡಾ, ಹಬ್ಬಾನಟ್ಟಿ, ಕನಕುಂಬಿ, ಭೇಟನೆ ಹಾಗೂ ಚೋರ್ಲಾ ದಂತಹ ಗ್ರಾಮಗಳು ಸರಿಯಾದ ರಸ್ತೆಗಳಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಅಲ್ಲದೇ ಆರೋಗ್ಯ ಸೇವೆಗಳು ಸಹ ಇಲ್ಲಿ ನಿಲುಕದ ನಕ್ಷತ್ರವೇ ಸರಿ. ಇಂತಹ ಗ್ರಾಮಗಳಿಗೆ ಇಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಲೋಕಕಲ್ಪ ಫೌಂಡೇಷನ್ ನ ಸಹಯೋಗದಲ್ಲಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಇದೇ ರೀತಿಯ ಸೇವೆಯನ್ನು ಸಲ್ಲಿಸಲು ಕೆ ಎಲ್ ಇ ಸಂಸ್ಥೆಯು ಸದಾಸಿದ್ದವಿರುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದರು.