This is the title of the web page
This is the title of the web page

Please assign a menu to the primary menu location under menu

Local News

ಉಚಿತ ಆರೋಗ್ಯ ತಪಾಸಣಾ ಶಿಬಿರ


ಬೆಳಗಾವಿ: ಒಟ್ಟು ೮೦ ಕೋವಿಡ ಸಂತ್ರಸ್ತರ ಮಕ್ಕಳಿಗೋಸ್ಕರ ಉಚಿತವಾಗಿ ಶಾಲಾ ಸಾಮಗ್ರಿ ,ರೇಷನ್ ಕಿಟಗಳನ್ನು ವಿತರಿಸಲಾಯಿತು ಹಾಗೂ ಉಚಿತವಾಗಿ ಮಕ್ಕಳಿಗೆ ಮತ್ತು ೭೦ ಪೋಷಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಆಶ್ರಯ ಫೌಂಡೇಶನ್ ಆಯೋಜಕರು ಹಾಗೂ ರಿಟ್ಸ ಲಿಮಿಟೆಡ್ ಸಹಯೋಗದಲ್ಲಿ ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮಾಂತರ ಹಾಗೂ ಬೈಲಹೊಂಗಲ ಮತ್ತು ಕಿತ್ತೂರಿನ ಒಟ್ಟು ೮೦ ಕೋವಿಡ ಸಂತ್ರಸ್ತರ ಮಕ್ಕಳಿಗೋಸ್ಕರ ಅಕ್ಲರೆಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಸ್ಕೂಲ್ ಕಿಟ್ , ರೆಶನ್ ಕಿಟ್ ಉಚಿತವಾಗಿ ವಿತರಿಸಿದರು. ರಿಟ್ಸ ಹಾಗೂ ಆಶ್ರಯ ಫೌಂಡೆಶನ್ ವತಿಯಿಂದ ಕರೋನದಿಂದ ಪಾಲಕರನ್ನು ಕಳೆದುಕೊಂಡು ಸಂತ್ರಸ್ತ ಮಕ್ಕಳಿಗೆ ಹಾಗೂ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತ ಹಾಗೂ ಬಿ ಪಿ ತಪಾಸಣೆ,ಎಚ್ ಬಿ, ಶುಗರ್ ತಪಾಸಣೆ ಹಾಗೂ ಚಿಕಿತ್ಸೆ ಯೊಂದಿಗೆ ಉಚಿತ ಔಷಧಿ ಮಾತ್ರೆ ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದರಿಗೆ ಉಚಿತವಾಗಿ ಪ್ರೋಟಿನ್ ಪೌಡರ್ ವಿತರಿಸಲಾಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ರಿಟ್ಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಲಕ್ಷ್ಮಣ ತಪ್ಸೆ ಯವರು ಮಾತನಾಡುತ್ತಾ ನಗರ ಹಾಗೂ ಗ್ರಾಮೀಣ ಜನರ ಆರೋಗ್ಯ ಸುಧಾರಣೆ ಹಾಗೂ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಕುರಿತು ಇಂದಿನ ಮಕ್ಕಳೆ ನಾಳಿನ ಭವ್ಯಭಾರತದ ಭವಿಷ್ಯ ವಾಗಿದ್ದಾರೆ ಅವರ ಆರೋಗ್ಯ ಹಾಗೂ ಭವಿಷ್ಯದ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.
ಆಶ್ರಯ ಫೌಂಡೇಶನ್ ದಕ್ಷ ಕಾರ್ಯನಿರ್ವಹಣೆ ಗಮನಿಸಿ ಈ ಶಿಬಿರಗಳ ಆಯೋಜನೆ ಜವಾಬ್ದಾರಿ ಅವರಿಗೆ ನೀಡಲಾಗಿದೆ ಎಂದು ಹೇಳಿದರು
ಮುಖ್ಯ ಅಥಿತಿಗಳಾದ ವಿಠ್ಠಲ ದಾಸ್ ಕಾಮತ್ ತಮ್ಮ ಮಾತುಗಳಲ್ಲಿ ಸಮಾಜದಿಂದ ನಾವು ಪಡೆದ ಸಹಾಯಕ್ಕೆ ಪ್ರತಿಯಾಗಿ ನಾವು ಕೂಡಾ ಸಮಾಜಕ್ಕೆ ಏನಾದರೂ ಉಪಯೋಗವಾಗುವ ಸೇವೆ ನೀಡಬೇಕೆಂದು ಹೇಳಿದರು. ಮತ್ತೋರ್ವ ಅಥಿತಿಗಳಾಗಿ ಆಗಮಿಸಿದ ಶ್ರೀ ಸುರೇಶ್ ಅರಗಂಜಿ ಅವರು ಕರೋನಾ ಸಂತ್ರಸ್ತ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ವಾಡುತ್ತ ತಾವು ತಮ್ಮ ಸಂಸ್ಥೆಯನ್ನು ಯಾವುದೆ ಸರ್ಕಾರದ ಸಹಾಯ ಸೌಲಭ್ಯಗಳನ್ನು ಬಳಸಿಕೊಳ್ಳದೆ ಕೇವಲ ತಮ್ಮ ನಡೆ ಸಾರ್ವಜನಿಕರ ಕಡೆಗೆ ಎಂಬ ಅಭಿಯಾನದ ಮೂಲಕ ಹಣ ಸಂಗ್ರಹಿಸಿ ಅದರ ಮೂಲಕ ಬಡಮಕ್ಕಳಿಗ ವಿದ್ಯಾಭ್ಯಾಸ ಹಾಗೂ ಆರೋಗ್ಯ ರಕ್ಷಣೆಯೊಂದಿಗೆ ಅವರು ಕೂಡಾ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರೆಸಿಡೆಂಟ್ ರಾಜಶ್ರೀ ಅನಗೋಳ,ಡಾ.ರವೀಂದ್ರ ಅನಗೋಳಕ,ಡಾ.ಅನಿತಾ ಉಮದಿ,ಡಾ.ಅಭಿನಿತ ಸಾವಂತ, ಶ್ರೀ ಆರ್ತೋ &ಟ್ರಾಮಾ ಸೆಂಟರ್ ಬೆಳಗಾವಿ ಗೌತಮ್ ಸರ್ ಹಾಗೂ ಸಿಬ್ಬಂದಿ.ಶ್ರೀಯುತ ರಾಜಶೇಖರ ದೋಣಿ ಮಹಾಂತೇಶ ನಗರದ ಕಾರ್ಪೋರೇಟರ್ . ಸಿದ್ದಾರ್ಥ್ ನೇತ್ರಾಲಯ ಡಾ.ಲಕ್ಷ್ಮಿ ,ಡಾ .ಸತೀಶ್ ಹಾಗೂ ಸಿಬ್ಬಂದಿ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಆಶ್ರಯ ಫೌಂಡೇಶನ್ ಮಕ್ಕಳು ಹಾಗೂ ನಿರ್ದೇಶಕರಾದ ಶ್ರೀಮತಿ ಪ್ರಮೀಳಾ ಜಗದೀಶ್ ಕಾದರೊಳ್ಳಿ . ಸಲಹಾ ಸಮೀತಿಯ ಸದಸ್ಯರಾದ, ಶ್ರೀಮತಿ ಆಶಾ ಯಮಕನಮರಡಿ.ಸ್ವಯಂಸೇವಕರಾದ ಸಂಜಯ್ ,ಅನಿಲ್, ರಾಹುಲ್, ನಳೀನ್ ,ಜ್ಞಾನೇಶ್,ಗೀರಿಶ್, ಕುನಾಲ್, , ,ಸಹನಾ,ಸೌರಭ,ಮಧು ,ಕೋಮಲ್,ಆಜ್ವಾನ್ ,ಶಿಲ್ಪಾ,ಮಂಜುನಾಥ್, ವಿನೋದ್ , ಪ್ರಸಾದ್ ಹಾಗೂ ಆಶ್ರಯ ಮಕ್ಕಳು ಕಾರ್ಯಕ್ರಮಕ್ಕಾಗಿ ಶ್ರಮಿಸಿದರು.
ಆಶ್ರಯಮಕ್ಕಳು ಪ್ರಾರ್ಥನೆ ಮಾಡಿದರು , ಆಶ್ರಯ ಫೌಂಡೇಶನ್ ದ ಸಲಹಾ ಸದಸ್ಯರಾದ ಶ್ರೀಮತಿ ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು.ಆಶ್ರಯ ಫೌಂಡೇಶನ್ ಸಂಸ್ಥಪಕರಾದ ಶ್ರೀಮತಿ ನಾಗರತ್ನ ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಸಹಕರಿಸಿದ ಎಲ್ಲರಿಗೂ ಆಭಾರಮನ್ನಣೆ ಸಲ್ಲಿಸಿದರು ಶಿಬಿರವನ್ನು ಆಯೋಜನೆ ಮಾಡಲು ನೀಡಿದಂತಹ ಮಹಾಂತ ಭವನದ ಬೆಳಗಾವಿ ಸಭಾಗ್ರಹ ತಂಡದವರಿಗೂ ಧನ್ಯವಾದಗಳು ತಿಳಿಸಿದರು . ಬಂದ ಮಕ್ಕಳನ್ನು ನೋಡಿ ತುಂಬಾ ನೋವಾಯಿತು ತಂದೆ-ತಾಯಿಯ ಪೋಷಣೆಯಲ್ಲಿ ಬೆಳೆಯುತ್ತಿರುವ ಮಕ್ಕಳು ತಕ್ಷಣವಾಗಿ ತಂದೆ-ತಾಯಿಯನ್ನು ಕಳೆದುಕೊಂಡಾಗ ಆ ಮಕ್ಕಳ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತ ದೆ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿ ನಿಂತಿರುವ ಮಕ್ಕಳ ಭವಿಷ್ಯಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಮೊದಲನೆಯದಾಗಿ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು ಹಾಗೂ ಅವರ ಬಂದು ಭವಿಷ್ಯ ಉಜ್ವಲ ಆಗಲು ಶಿಕ್ಷಣದ ಅವಶ್ಯಕತೆ ಇದ್ದು ಅದನ್ನು ಪೂರೈಸಲು ಸಾಮಗ್ರಿಗಳು ಸ್ಕೂಲ್ ಕಿಟ್ , ರೆಶನ್ ಕಿಟ್ ಉಚಿತವಾಗಿ ವಿತರಿಸಲಾಯಿತು, ಆ ಮುಗ್ಧ ಮಕ್ಕಳು ಅವುಗಳ ನೋವಿನ ಹಿಂದೆ ಹೇಳಿದಷ್ಟು ನೋವಿದ್ದರೂ ಅನಿವಾರ್ಯ ಕಾರಣದಿಂದ ಜೀವನ ಸಾಗಿಸುತ್ತಿದ್ದಾರೆ ಅಧ್ಯಕ್ಷೀಯ ಭಾಷಣದಲ್ಲಿ ನಾಗರತ್ನ ಆಶ್ರಯ ಪೌಂಡೇಶನ್ ಸಂಸ್ಥಾಪಕಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು .


Gadi Kannadiga

Leave a Reply