This is the title of the web page
This is the title of the web page

Please assign a menu to the primary menu location under menu

State

ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮ


ಗದಗ ಎಪ್ರಿಲ್ ೨೮: ೨೦೨೩-೨೪ನೇ ಸಾಲಿನ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗುತ್ತಿದ್ದು ತರಬೇತಿ ಶಿಬಿರದ ಚಟುವಟಕೆಗಳಾದ ಚಿತ್ರಕಲೆ, ಕರಕುಶಲ ಕಲೆ, ಕಸದಿಂದ ರಸ, ಸಮೂಹ ನೃತ್ಯ/ಶಾಸ್ತ್ರೀಯ ಸಮೂಹ ಸಂಗೀತ, ಕರಾಟೆ, ಯೋಗ, ಜ್ಯೂವೆಲರಿ ಮೇಕಿಂಗ್, ಮತ್ತು ಮೆಹಂದಿ, ಗ್ರಾಮೀಣ ಕ್ರೀಡೆ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗವುದು.
ಈ ಉಚಿತ ಬೇಸಿಗೆ ಶಿಬಿರವು ಮೇ ೫ರಿಂದ ಒಟ್ಟು ೧೫ ದಿನಗಳವರೆಗೆ ಭಾನುವಾರ ಹೊರತುಪಡಿಸಿ ವಿಭಾಗೀಯ ಮಟ್ಟದ ಸ್ತ್ರೀಶಕ್ತಿ ಭವವ, ಹಾತಲಗೇರಿ ರೋಡ, ಶ್ರೀಸಾಯಿಬಾಬ ಮಂದಿರ, ರಿಂಗ್ ರೋಡ್ ಹತ್ತಿರ, ಗದಗ ಬೆಳಿಗ್ಗೆ ೧೦ ಗಂಟೆಯಿಂದ ೪ ಗಂಟೆಯವರೆಗೆ ಜರುಗಲಿದೆ. ೦೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಅವಕಾಶವಿದೆ. ಸರಕಾರಿ ಶಾಲಾ ಮಕ್ಕಳು, ವಿಕಲಚೇತನ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ ಹಾಗೂ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಶಿಬಿರದಲ್ಲಿ ಮೊದಲು ನೋಂದಾಯಿಸಿದ ೭೫ ಮಕ್ಕಳಿಗೆ ಮಾತ್ರ ಅವಕಾಶವಿರುವ್ಯದು. ಅರ್ಜಿ ಸಲ್ಲಿಸಲು ಮೇ ೪ ಕೊನೆಯ ದಿನವಾಗಿದ್ದು ನಿಗದಿತ ಅರ್ಜಿ ನಮೂನೆಯೊಂದಿಗೆ ಆಧಾರ್ ಕಾರ್ಡ ಝೆರಾಕ್ಸ್ ಪ್ರತಿ ಹಾಗೂ ಪಾಸ್‌ಪೋರ್ಟ ಸೈಜ್ ಫೋಟೋವನ್ನು ಲಗತ್ತಿಸಿ ಸಲ್ಲಿಸಬೇಕು. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ ೦೦೬ , ಜಿಲ್ಲಾ ಆಡಳಿತ ಭವನ, ಗದಗ ದೂರವಾಣಿ ಸಂಖ್ಯೆ ೦೮೩೭೨-೨೨೦೭೧೧, ರವಿ ಎಫ್ ಉಮಚಗಿ- ೯೯೧೬೧೫೨೩೪೭, ಜಿಲಾ ಬಾಲಭವನ ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.


Leave a Reply