ಕೊಪ್ಪಳ ಆಗಸ್ಟ್ ೦೩ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಭೂಮಿ ಐಎಎಸ್ & ಕೆಎಎಸ್ ಸ್ಟಡಿ ಸರ್ಕಲ್ ಕೊಪ್ಪಳ ಇವರ ಸಹಯೋಗದಲ್ಲಿ ಪಿಡಿಓ ಪರೀಕ್ಷೆಗೆ ಉಚಿತ ಕಾರ್ಯಾಗಾರವನ್ನು ಆಗಸ್ಟ್ ೦೪ರಂದು ಸಾಯಂಕಾಲ ೪ಗಂಟೆಗೆ ನಗರದ ಸಾಹಿತ್ಯ ಭವನದ ಪಕ್ಕದಲ್ಲಿರುವ (ಅಶೋಕ ಸರ್ಕಲ್) ಲಯನ್ಸ್ ಆಸ್ಪತ್ರೆ ಕಾಂಪ್ಲೆಕ್ಸ್ನ ಭೂಮಿ ಸ್ಟಡಿ ಸರ್ಕಲ್‌ನಲ್ಲಿ ಆಯೋಜಿಸಲಾಗಿದ್ದು, ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.
ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಸ್.ಪ್ರಾಣೇಶ (ಕೆ.ಎ.ಎಸ್), ಮಂಗಳೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಭೀಮಪ್ಪ ಎಚ್ ಗೊಲ್ಲರ, ಹೊಸಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ವೀರೇಶ ಬಿ ಅವರು ಪಾಲ್ಗೊಳ್ಳಲಿದ್ದಾರೆ. ಅರ್ಹ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಿ. ೦೮೫೩೯-೨೨೦೮೫೯, ೯೩೫೩೫೧೫೫೧೮ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಆಗಸ್ಟ್ ೦೪ರಂದು ಕೊಪ್ಪಳದಲ್ಲಿ ಪಿಡಿಓ ಪರೀಕ್ಷೆಗೆ ಉಚಿತ ಕಾರ್ಯಾಗಾರ
ಆಗಸ್ಟ್ ೦೪ರಂದು ಕೊಪ್ಪಳದಲ್ಲಿ ಪಿಡಿಓ ಪರೀಕ್ಷೆಗೆ ಉಚಿತ ಕಾರ್ಯಾಗಾರ
Suresh03/08/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023