ಗದಗ ಫೆಬ್ರುವರಿ ೩: ಕ್ರೀಡಾ ಇಲಾಖೆಯಿಂದ ಫೆಬ್ರುವರಿ ೫ ರಿಂದ ೭ ರವರೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸುಧಾ ಜಿ. ಪಾಟೀಲ, ಯೋಗ ಶಿಕ್ಷಕರು, ಪಾಪನಾಶಿ, ಇವರಿಂದ ಬೆಳಿಗ್ಗೆ ೬ ಗಂಟೆಯಿಂದ ೭ ಗಂಟೆಯವರೆಗೆ ಎಲ್ಲ ವಯಸ್ಸಿನವರಿಗೂ ಅನುಕೂಲವಾಗುವಂಥ ಸರಳ ಆಸನಗಳನ್ನು ದಿನನಿತ್ಯದ ಅನುಕೂಲಕ್ಕಾಗಿ ಉಚಿತ ಯೋಗಾಸನ ತರಬೇತಿ ನೀಡಲಾಗುವುದು. ಆಸಕ್ತರು ಈ ಯೋಗಾಸನ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ದೂರವಾಣಿ ಸಂ.೦೮೩೭೨-೨೩೮೩೪೫ ಗೆ ಸಂಪರ್ಕಿಸಹುದಾಗಿದೆ.
Gadi Kannadiga > State > ಉಚಿತ ಯೋಗಾಸನ ತರಬೇತಿ