ಬೆಳಗಾವಿ,ನ.೧೬: ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತ ಆಶ್ರಯದೊಂದಿಗೆ ನವೆಂಬರ್ ೧೮ ರಿಂದ ೨೦ ರವರೆಗೆ ನಗರದಲ್ಲಿ ೬೩ ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಫಲಪುಷ್ಪ ಪ್ರದರ್ಶನವನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಣೆ ಮಾಡಲಿದ್ದಾರೆ. ಪ್ರದರ್ಶನದಲ್ಲಿ ಪ್ರಗತಿ ಪರ ರೈತರು ಬೆಳೆದಂತಹ ವಿಷೇಶ ಗುಣಮಟ್ಟ ಹೊಂದಿರುವ ತರಕಾರಿ, ಹಣ್ಣು, ಹೂವು, ಸಾಂಬಾರು ಹಾಗೂ ಪ್ಲ್ಯಾಂಟೆಶನ್ ಬೆಳೆಗಳನ್ನು ಪ್ರದರ್ಶಿಸಲಾಗುತ್ತದೆ.
ಸಾರ್ವಜನಿಕರಿಗಾಗಿ ಹೂವಿನಿಂದ ವಿವಿಧ ಅಲಂಕೃತ ಕಲಾಕೃತಿಗಳು, ಉಸುಕಿನ ಕಲೆ (Sಚಿಟಿಜ ಂಡಿಣ), ಗಾಜಿನ ಕಲೆ (ಉಟಚಿss ಂಡಿಣ), ಹೂವು ಜೋಡನೆ, ಕುಂಡಗಳ ಜೋಡನೆ, ವಿದೇಶ ಹೂವುಗಳ ಪ್ರದರ್ಶನ, ಬೋನ್ಸಾಯ ಪ್ರದರ್ಶನ, ಕಟ್ ಹೂವುಗಳ ಪ್ರದರ್ಶನ, ತರಕಾರಿ/ಹಣ್ಣು ಕೆತ್ತನೆ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಫಲಪುಷ್ಪ ಪ್ರದರ್ಶನದ ದಿನಗಳಂದು ಸಾಯಂಕಾಲ ೬.೩೦ ರಿಂದ ೮ ಗಂಟೆಯ ವರೆಗೆ ಆಯೋಜಿಸಲಾಗಿದೆ. ನ. ೧೮ ರಂದು ಬೆಳಿಗ್ಗೆ ೯ ಗಂಟೆಗೆ ರಂಗೋಲಿ ಸ್ಪರ್ದೆಯನ್ನು ಸಹ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು ಹಾಗೂ ಸದರಿ ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ ೯ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಫಲಪುಷ್ಪ ಪ್ರದರ್ಶದಲ್ಲಿ ೨೫ಕ್ಕು ಹೆಚ್ಚು ಮಳಿಗೆಗಳಿಗೆ ಹಾಗೂ ನರ್ಸರಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ಸಾರ್ವಜನಿಕರು/ ರೈತ ಬಾಂಧವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :೦೮೩೧-೨೪೫೧೪೨೨ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲ ತಿಳಿಸಿದ್ದಾರೆ.
Gadi Kannadiga > Local News > ೬೩ ನೇ ಫಲಪುಷ್ಪ ಪ್ರದರ್ಶನ: ನ.೧೮ ರಿಂದ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023