ಕೊಪ್ಪಳ, ನವೆಂಬರ್ ೧೫ : ಗುವಿಸಕಂನಿ (ಜೆಸ್ಕಾಂ) ಕೊಪ್ಪಳ ವಿಭಾಗ ವ್ಯಾಪ್ತಿಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅದಾಲತ್ ಅನ್ನು ನವೆಂಬರ್ ೧೯ ರಿಂದ ಏರ್ಪಡಿಸಲಾಗಿದೆ.
ಜೆಸ್ಕಾಂ ಕೊಪ್ಪಳ ವಿಭಾಗದ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ನಡೆಸುವಂತೆ ಮುಖ್ಯ ಅಭಿಯಂತರರು (ವಿದ್ಯುತ್) (ಕಾರ್ಯಾಚರಣೆ) ನಿಗಮ ಕಚೇರಿ, ಜೆಸ್ಕಾಂ ಕಲಬುರಗಿ ರವರ ನಿರ್ದೇಶನದ ಮೇರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ೨೦೨೨ರ ನವೆಂಬರ್ ಮತ್ತು ಡಿಸೆಂಬರ್ ಹಾಗೂ ೨೦೨೩ರ ಜನವರಿ ಮಾಹೆಯಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಅಧ್ಯಕ್ಷತೆಯಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿದ್ಯುತ್ ಅದಾಲತ್ :
ಇದೇ ನವೆಂಬರ್ ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಜೆಸ್ಕಾಂ ಕೊಪ್ಪಳ ಉಪ ವಿಭಾಗದ ವತಿಯಿಂದ ಕೊಪ್ಪಳ ತಾಲ್ಲೂಕಿನ ತಾಳಕನಕಾಪುರ ಹಾಗೂ ಹ್ಯಾಟಿ ಮುಂಡರಗಿ ಗ್ರಾಮಗಳಲ್ಲಿ ಮತ್ತು ಮುನಿರಾಬಾದ್ ಉಪ ವಿಭಾಗದ ವತಿಯಿಂದ ಹಾಲಳ್ಳಿ ಹಾಗೂ ಕೆರೆಹಳ್ಳಿ, ಯಲಬುರ್ಗಾ ಉಪ ವಿಭಾಗದ ವತಿಯಿಂದ ಯಲಬುರ್ಗಾ ತಾಲ್ಲೂಕಿನ ಯಡ್ಡೋಣಿ, ಕುಕನೂರು ತಾಲ್ಲೂಕಿನ ಅಡವಿಹಳ್ಳಿಯಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
ಡಿಸೆಂಬರ್ ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ಉಪ ವಿಭಾಗದ ವತಿಯಿಂದ ಕೊಪ್ಪಳ ತಾಲ್ಲೂಕಿನ ಅಬ್ಬಿಗೇರಿ ಹಾಗೂ ಅರಸನಕೇರಿ ತಾಂಡಾ ಮತ್ತು ಮುನಿರಾಬಾದ್ ಉಪ ವಿಭಾಗದ ವತಿಯಿಂದ ಕೊಪ್ಪಳ ತಾಲ್ಲೂಕಿನ ಶಹಾಪುರ ಹಾಗೂ ನಾಗೇಶನಹಳ್ಳಿ ಮತ್ತು ಯಲಬುರ್ಗಾ ತಾಲ್ಲೂಕಿನ ಬಂಡಿಹಾಳ ಹಾಗೂ ಕುಕನೂರು ತಾಲ್ಲೂಕಿನ ನೆಲಜೇರಿ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಜರುಗಲಿದೆ.
೨೦೨೩ರ ಜನವರಿ ೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ಉಪ ವಿಭಾಗದ ವತಿಯಿಂದ ಕೊಪ್ಪಳ ತಾಲ್ಲೂಕಿನ ಲೇಬಗೇರಿ ಹಾಗೂ ಹಟ್ಟಿ(ಬೆಟಗೇರಾ) ಮತ್ತು ಮುನಿರಾಬಾದ್ ಉಪ ವಿಭಾಗದ ವತಿಯಿಂದ ಕೊಪ್ಪಳ ತಾಲ್ಲೂಕಿನ ಅಲ್ಲಾನಗರ ಹಾಗೂ ಮಹ್ಮದ್ ನಗರ ಮತ್ತು ಯಲಬುರ್ಗಾ ಉಪ ವಿಭಾಗದ ವತಿಯಿಂದ ಯಲಬುರ್ಗಾ ತಾಲ್ಲೂಕಿನ ಬಂಡಿ ಹಾಗೂ ಕುಕನೂರು ತಾಲ್ಲೂಕಿನ ವೀರಾಪೂರ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
ವಿದ್ಯುತ್ ಅದಾಲತ್ಗೆ ಆಗಮಿಸುವ ಗ್ರಾಹಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುರ ಮೂಲಕ ಕಡ್ಡಾಯವಾಗಿ ಕೋವಿಡ್-೧೯ ನಿಯಮಗಳನ್ನು ಪಾಲಿಸಬೇಕು ಹಾಗೂ ವಿದ್ಯುತ್ ಅದಾಲತ್ನಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆ ದೂರುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Gadi Kannadiga > State > ನ. ೧೯ ರಿಂದ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅದಾಲತ್
ನ. ೧೯ ರಿಂದ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅದಾಲತ್
Suresh15/11/2022
posted on